Thursday, 5 December 2013

ಟೀಚರ್...

ಬಹುಶಃ ಅವಳು
ಆಗಿದ್ದಿರಬಹುದು...!??
ಪ್ರಾಣಾಯಾಮದ ಟೀಚರು;
ಕಾರಣ...
ನನಗರಿವಿಲ್ಲದಂತೆಯೇ
ದೀರ್ಘವಾದ ಶ್ವಾಸವನು
ತೆಗೆದುಕೊಳ್ಳುತ್ತೇನೆ.
ಬಂದರೆ ಅವಳು ನನ್ನೆದುರು ;
ಮತ್ತಾಕೆ ಮರೆಯಾದಾಗ...
ನಿರಾಸೆಯ
ದೀರ್ಘ ನಿಟ್ಟುಸಿರು.

ಚಳಿ

ಬಚ್ಚಲು ಮನೆಯ
ಮೂಲೆಯಲ್ಲಿ ನಿನ್ನೆ
ಸಂಜೆ ಅಮ್ಮ ತಂದಿಟ್ಟ
ರಾಶಿ ರಾಶಿ ತರಗೆಲೆ...
ಅದನು ಸುಟ್ಟು ಸಿಕ್ಕ
ಶಾಖದಿಂದ ಆಯಿತು
ನನ್ನ ಕಾಡುತಿದ್ದ
ಚಳಿರಾಯನ ಕೊಲೆ,

ಆತುರ...

ಇರುಳ ಏಕಾಂತದಲಿ
ಅವಳ ಕನಸಿನ
ಪಲ್ಲಕಿಯ ಹೊರಲು,
ಆತುರಾತುರದಿ
ಸಿದ್ಧವಾಗತೊಡಗಿದೆ
ನನ್ನ ಕಂಗಳ ಹೆಗಲು.

ಸನಿಹ



ಪ್ರೀತಿ ಸೂಸುವ
ನಗುವನಿನ
ಕಂಪನು
ಅವಳೆದುರು
ಚೆಲ್ಲುತ್ತಿದ್ದರೂ
ಯಾಕೋ ...?
ಆಕೆ ನನ್ನ
ಕೈಗೆಟಕುವಷ್ಟು
ಸನಿಹಕ್ಕೆ
ಬಾರಲೇ ಇಲ್ಲ

ವಿದಾಯ



ಬಾಲ್ಯದಲಿನ
ಪ್ರತಿಯೊಂದು
ಕ್ಷಣಗಳನು
ಮೆಲುಕು
ಹಾಕುತ್ತಾ,
ತನ್ನ ಕೈ
ಹಿಡಿದು
ಬೆಳೆಸಿದವರ
ನೆನೆದುಕೊಳ್ಳುತ್ತಾ,
ಕೃತಜ್ಞತೆಯ
ಸಲ್ಲಿಸುವಲ್ಲಿ
ಎಡವಿಬಿಟ್ಟೇನೋ
ಎಂದು
ಗಾಬರಿಯಾಗುತ್ತಾ,
ಭಾವುಕ
ಮಾತುಗಳ
ಮುಗಿಸಿದ,
ಆದರೆ....
ಲೆಕ್ಕವಿಲ್ಲದಷ್ಟು
ಜನರ
ಅಭಿಮಾನ
ತಂದಿತ್ತ ತನ್ನಾಟಕೆ
ಪದಗಳ
ಪುರಸ್ಕಾರವನೀಯಲಿಲ್ಲ,
ಬದಲಾಗಿ ತನ್ನ
ಕಣ್ಣೀರ ಹನಿಗಳ
ಅಭಿಷೇಕವಗೈದ
ಮೆಲ್ಲನೆ ತನ್ನ
ತಲೆಯ ಬಾಗುತ್ತಾ..

ದಾಂಧಲೆ...

ಸುಮ್ಮನೆ ಬಿಟ್ಟಿರಲಿಲ್ಲ
ನನಗೀಗಲೂ ನೆನಪಿದೆ
ಕೈಕೊಟ್ಟು ಇನ್ನೊಬ್ಬನನು
ವರಿಸಿದ ಅವಳ
ಮದುವೆಯಲಿ ನಾ
ಧಾಂದಲೆ ಮಾಡಿದ್ದು....
ಬೇಕಿದ್ದರೆ ಕೇಳಿ ನೋಡಿ
ಅಂದು ಅಡುಗೆ ಮಾಡುತ್ತಿದ್ದವರನು,
ಸಣ್ಣಗೆ ತೇಗು ತೆಗೆಯುತ್ತಾ
ನಾನೆದ್ದು ಕೈತೊಳೆದಾಗಲೇ
ಅವರು ನಿಟ್ಟುಸಿರು ಬಿಟ್ಟಿದ್ದು

ವಿಪರ್ಯಾಸ

ಹಿಂದುತ್ವದ ಮಾತೆತ್ತಿದರೆ
ಕೋಮುವಾದಿ ಎಂದು ಜರೆದವರು;
ಪ್ರಗತಿಯ ಮಾತೆತ್ತಿದರೆ
ಗೋರಿಯ ಮೇಲಿನ ಪ್ರಗತಿಯದು
ಎಂದಪಹಾಸ್ಯವಗೈದವರು,
ಬೆಂಬಲದ ಅಭಯ"ಹಸ್ತ"ವ ತೋರಿದ್ದು
ಪ್ರಗತಿಯನು ಬದಿಗೊತ್ತಿ
ಹತೈವತ್ತು ವರ್ಷಗಳಿಂದ
ಬರಿಯ ಬಡ ಭಾರತೀಯರ
ಗೋರಿಯನೇ ಕಟ್ಟುತಿರುವ
ಹುಸಿ ಜಾತ್ಯಾತೀತರಿಗೆನುವುದು
ವಿಪರ್ಯಾಸವೇ ತಾನೇ..