Wednesday 30 November, 2011




ಪ್ರತೀ ಇರುಳು
ಕಡಲಿನಾಳದಿಂದ 
ಅದ್ಯಾವ
ಮುತ್ತು ರತ್ನಗಳ 
ಕದ್ದು ತರುವೆ ?
ಕಣ್ಣು ಕೋರೈಸುವ 
ಆ ರತ್ನಗಳ
ಮೈ ತುಂಬಾ ಧರಿಸಿ
ಜಗಕೆ ನೀ 
ಬೆಳಕ ಕೊಡುವೆ.
ನಿಜಕೂ ಇದು
ನಿನಗೆ ತರವೇ?

Monday 28 November, 2011




ಕವಿ ಹೃದಯದ
ಗೆಳೆಯ-ಗೆಳತಿಯರ 
ಈ ಗುಂಪು
ಒಂದು ರೀತಿಯಲಿ
ಸರಿಸಮವು ದೇವಲೋಕದ
ಉದ್ಯಾನವನಕೆ;
ಕಣ್ಮನ ತಣಿಸುವ
ಪ್ರೇಮ ಕಾವ್ಯಗಳ ಸುಮವ
ಕೊಟ್ಟಿಹವು ಹಲವು
ಕವಿ ಗಿಡಗಳು,
ಇಲ್ಲಿನಾಕರ್ಷಣೆಯ
ಹೆಚ್ಚಿಸುವುದಕೆ;
ಜೀವನದ ಸಾರಾಮೃತವನೆ
ರುಚಿಯನಾಗಿಸಿಹ ಕಾವ್ಯಗಳ ಫಲವ
ಕೊಟ್ಟಿಹವು ಹಲವು
ಕವಿ ಮರಗಳು,
ಓದುಗನೆಂಬ ಪ್ರಕೃತಿ ಪ್ರೇಮಿಯ
ಹಸಿವನಿಲ್ಲದಂತಾಗಿಸುವುದಕೆ;
ಈ ಉದ್ಯಾನವನದೊಳಗೆ
ನನಗೊಂದು ನೆಲೆ
ಕೊಟ್ಟಿರುವರೆನುವುದೇ
ನನ್ನ ಪಾಲಿನ ಹೆಗ್ಗಳಿಕೆ;
ಫಲ ಪುಷ್ಪಗಳ ನೀಡದಿದ್ದರೇನಂತೆ?
ನಾನಾಗಿರುವೆ ಈ ತೋಟದ ನೆಲಕೆ,
ಹಸಿರನೀವ ಬರಿಯ ಹುಲ್ಲು ಗರಿಕೆ.

Saturday 26 November, 2011







ವರುಷ ಮೂರು ಕಳೆದು ಹೋಗಿದೆ,
ನೆನಪು ಮನದೊಳಗಿಂದೂ ಅಚ್ಚಳಿಯದುಳಿದಿದೆ,
ಬತ್ತದಾ ಕಣ್ಣೀರಿಂದೂ ಉಕ್ಕಿ ಹರಿದಿದೆ,
ಆದರೇಕೋ ಕುದಿಯಬೇಕಾಗಿದ್ದ ನೆತ್ತರು ಮಾತ್ರ ಹೆಪ್ಪುಗಟ್ಟಿದೆ.

ನಮ್ಮ ರಕ್ಷಣೆಗೆ ಸಲುವಾಗಿ ತಮ್ಮ ಪ್ರಾಣವನೆ ಮುಡಿಪಾಗಿಟ್ಟರವರು
ನಮ್ಮ ಹಿಂದೆ ಸರಿಸಿ ಬರುತ್ತಿದ್ದ ಗುಂಡಿಗೆ ತಮ್ಮ ಗುಂಡಿಗೆಯನೆ ಇತ್ತರವರು
ನಮ್ಮ ರಕ್ತ ತೊಟ್ಟಿಕ್ಕಬಾರದೆಂದು, ತಮ್ಮ ರಕ್ತವನೆ ಹರಿಸಿದರು ಅವರು
ಆದರೇಕೋ ಅವರ ಬಲಿದಾನವನೆ ಮರೆತಿಹರು, ನಮ್ಮನಾಳುವವರು.

ಪಾತಕಿಯ ಉಪಚರಿಸಲು ಇಲ್ಲಿಹುದು ಕೋಟಿ ಕೋಟಿ ಹಣವು
ಕಾಣದಿವರಿಗೆ ಪ್ರಾಣ ತೆತ್ತೆ ಸಂಸಾರ ಸಹಿಸುತಿಹ ನೋವು
ಬನ್ನಿ ಕೈ ಜೋಡಿಸೋಣ ಇವರುಗಳ ಕಣ್ಣೀರೊರೆಸಲು ನಾವು
ಕೊಡಿಸುವುದಕೆ ಹೋರಾಡೋಣ, ಕಸಬ್ ಎಂಬ ಉಗ್ರನಿಗೆ ಸಾವು.

ಅಪ್ರತಿಮ ವೀರರ ನಾಡಲಿ ಹುಟ್ಟಿಹ ನಾವೇಕೆ ಸತ್ತಂತೆ ಮಲಗಿಹೆವು?
ನಮ್ಮ ಹೊತ್ತಿರುವ ಮಾತೆಯ ಕರುಳ ಬಗೆದವಗೆ ಅತಿಥಿಯ ಸ್ಥಾನವನೇಕೆ ಕೊಟ್ಟಿಹೆವು?
ಜಗವೆ ನಗುತ್ತಿದ್ದರೂ ನಾವೇಕೆ ಕೈಯ ಕಟ್ಟಿ ಶಂಡರಂತೆ ಕುಳಿತಿಹೆವು?
ತೊಡೆ ತಟ್ಟಿ ನಿಲ್ಲೋಣ, ಜಗಕೆ ಸಾರಿ ಹೇಳೋಣ
ಇಂತಹಾ ದಿನವ ಮತ್ತೆಂದು ಬರಲು ಬಿಡೆವು, ಮತ್ತೆಂದು ಬರಲು ಬಿಡೆವು.

Thursday 24 November, 2011

ಭಾರತದ 
ಜನರಿಗೆಲ್ಲಾ
ಈಗ 
ಡೈಲಿ "worry"
ವಿಷಯ
ಯಾವಾಗಾಗುತ್ತೋ
ನಮ್ಮ ಐಶು
ಡೆಲಿವರಿ


ಬಾ ರವಿಯೆ




ನಿನ್ನೆ ರಾತ್ರಿ ಕಂಡ
ಸಾಧಕನಾಗುವ
ಕನಸೆನುವ ಕೂಸಿಗೆ
ಜೀವ ನೀಡಲು ಸಾಧ್ಯ,
ಬರಿಯ ನಿನ್ನ ಬೆಳ್ಳಿಯ ಕಿರಣಕೆ.
ನನ್ನ ಪರಿಶ್ರಮದ
ಪ್ರೇಮಧಾರೆಯೂ ಬೇಕು,
ಈ ಕಂದನ ಬೆಳವಣಿಗೆಗೆ;
ಬೆಳೆಸುವಾಸೆ ಓ ರವಿಯೆ,
ಅದಕಾಗಿ ಜೀವ ನೀಡಲು ಬಾ
ನನ್ನ ಮುದ್ದು ಕನಸಿಗೆ,
ವಿದಾಯವ ಹೇಳಿ ಆ ಶರಧಿಗೆ. 

Wednesday 23 November, 2011

ಚಿತ್ರ ಕವನ



ಮೋಡವೆನುವ
ಸಾಗರದೊಳಗಿಂದ,
ಹುಡುಕಿ ತಂದ,
ಅಪರೂಪದ ನೀರಹನಿಗಳ
ಮುತ್ತುಗಳಿಂದ
ಮನೆಯ ಸಿಂಗರಿಸಿರುವೆ;
ಈ ಚೆಲುವಿಗೆ 
ಮಾರು ಹೋಗಿ
ನನ್ನ ಮನೆಗೋಡಿ ಬರುವ
ಅತಿಥಿಗಳನೇ ಬೇಟೆಯಾಡಿ
ಹಸಿದ ಹೊಟ್ಟೆಯನು
ತಣಿಸಬೇಕೆಂದುಕೊಂಡಿರುವೆ.

Monday 21 November, 2011

ಏಕಲವ್ಯ


ಕವಿ ಎಂದೆನಿಸಿಕೊಂಡವನು
ಒಂದು ರೀತಿಯಲಿ
ಏಕಲವ್ಯನಂತೆ;
ಗುರುವಿರದೆ ಕಲಿತ
ವಿದ್ಯೆಯೇ ಕವನ ರಚನೆ;
ಸಾಹಿತ್ಯ ಕ್ಷೇತ್ರದಲಿ
ದ್ರೋಣರಂತಿರುವವರ
ರಚನೆಗಳ ಅಧ್ಯಯನವೇ
ಈ ಕವಿಗಳಿಗೆ ಕಲಿಕೆ;
ಈ ಕಲಿಕೆಯಿಂದಾಗಿ
ಸಿಗುವ ಅನುಭವವೇ
ಇವರುಗಳ ಸ್ವಂತ
ರಚನೆಗೆ ವೇದಿಕೆ.

Monday 14 November, 2011

ಕಹಿ ಸತ್ಯ


ಪಯಣಿಸುತಿರಲೊಮ್ಮೆ,
ಅರ್ಧ ತೆರೆದಿದ್ದ
ಬಸ್ಸಿನ ಕಿಟಕಿಗೆ
ತಲೆಯೊರಗಿಸಿ
ಕಣ್ ಮುಚ್ಚಿರಲು,
ಜೋರಾಗಿ ಬೀಸುತ್ತಿದ್ದ
ತಂಗಾಳಿಯು
ಮನವ ಮುದಗೊಳಿಸಿರಲು,
ತಂಪಾದ ಹನಿಯೊಂದು
ಬಂದು ನನ್ನ ಕೆನ್ನೆಯಲಿ
ಆಶ್ರಯವ ಪಡೆಯಿತು.
ಕ್ಷಣಾರ್ಧದಲಿ ಮನದ
ಭಾವನೆಯು ಕಲ್ಪಿಸತೊಡಗಿತು,
ನನ್ನವಳೇ ಹನಿಯಾಗಿ ಬಂದು
ಸಿಹಿ ಮುತ್ತೊಂದ ಕೊಟ್ಟಳೇ?
ಆ ಹನಿಯೊಳಗೆ
ಅವಳ ಕಾಣಬಯಸಿ,
ಬೆರಳ ತುದಿಯಲೊರಸಿ
ನೋಡಿದರೆ,
ಅದು ಹಸಿರು ಮಿಶ್ರಿತ
ಕೆಂಪು ಬಣ್ಣದ ಹನಿಯಾಗಿತ್ತು.
ಮನವು ಮತ್ತೆ ಯೋಚಿಸಿತು,
ಕೋಪಗೊಂಡಿರುವಳೇ ಅವಳು?
ಈ ಎಲ್ಲಾ ಭಾವನೆಗಳ
ನುಚ್ಚುನೂರಾಗುವಂತೆ ಮಾಡಿದ್ದು,
ನನ್ನೊಡಲನು ಕೋಪದಲಿ
ಕೆಂಪಾಗುವಂತೆ ಮಾಡಿದ್ದು,
ಕಹಿ ಸತ್ಯದರಿವು.
ನಿಜ ರೂಪವ ತೋರಿದಾಗ
ಈ ಕೆಂಪು ಹನಿಗಳು
ಮನದೊಳಗೆ ಮೂಡಿದ್ದು
ಸಾವಿರಾರು ಬೈಗಳು.
ನಾನೆನೆಸಿಕೊಂಡಿದ್ದ
ಅವಳೆನುವ ಹನಿಗಳು;
ವಾಸ್ತವದಲಿ ಆಗಿತ್ತು
ನನ್ನೆದುರಲ್ಲಿ ಕುಳಿತ್ತಿದ್ದವನ
ಪಾನಿನುಗುಳು.


ಅವಳಿಗಿಂತ ಅವಳ
ನೆನಪೇ ವಾಸಿ,
ಅವಳಷ್ಟು ಕಲ್ಲು
ಹೃದಯ ಅದರದಲ್ಲ;
ನಾನೊಂಟಿಯಾಗಿರಲು
ಬಂದಪ್ಪಿಕೊಳ್ಳುವುದು,
ನನ್ನೇಕಾಂತ
ಭಂಗವಾಗುವವರೆಗೆ
ಬಿಟ್ಟು ಹೋಗುವುದಿಲ್ಲ.

Sunday 13 November, 2011


ಅಣ್ಣಾ ಹಜಾರೆಯವರ
ಹೋರಾಟಕ್ಕೆ
ಬೆಂಬಲ ಕೊಡುವ ಬಗೆಗೆ
ವರದಿಗಾರನೋರ್ವ
ಸಂಗ್ರಹಿಸಿದ
ದೇಶದೊಳಗಿಹ
"ಪತಿ"ಯರೆಲ್ಲರ
ಅಭಿಮತ;
ಒಂದೇ ಒಂದು
ಷರತ್ತಿನಡಿಯಲ್ಲಿ
ಬೆಂಬಲಿಸುವರಂತೆ
ಅಣ್ಣಾರವರು ಮಾಡುವಂತೆಯೇ
ಇವರ ಪತ್ನಿಯರು
ಮಾಡಬೇಕಂತೆ
ತಿಂಗಳಿನಲಿ ಕನಿಷ್ಟ
ಒಂದಿಪ್ಪತ್ತು ದಿನ
ಮೌನವ್ರತ.
ಮಂಜಿನ ಹನಿಯ ತೆರೆಯನು ಸರಿಸಿ

                                                                                        
 ಕಡಲಿನ ನೀರಿನ ಜಳಕವ ಮುಗಿಸಿ

                                                                                        
  ಬಾ ರವಿಯೆ ಈ ಭುವಿಗವತರಿಸಿ

Thursday 10 November, 2011

ಅನಾಥ ಶಿಶು


ಅವಳ ಜೊತೆ
ಕಳೆದ ಸುಮಧುರ
ಕ್ಷಣಗಳ
ನೆನಪುಗಳೆನುವ
ಕ್ರೂರ ವೈರಿಯ
ಅತ್ಯಾಚಾರಕ್ಕೆ
ನನ್ನ ಕಂಗಳಿಂದು
ಬಲಿಪಶು;
ಇದರಿಂದಾಗಿ
ಬಸುರಾದ
ನನ್ನ ಕಂಗಳು,
ಹಡೆದಿರುವ
ಕಣ್ಣೀರೆನುವ ಕೂಸು,
ನನ್ನ ಕೆನ್ನೆಯೆನುವ
ಕಸದ ತೊಟ್ಟಿಯಲಿಂದು
ಒಂದು ಅನಾಥ ಶಿಶು.
ವೀರ "ಕುಮಾರ"

ಎಲ್ಲರೆದುರು ಮದುವೆಯಾಗಿ
ಪತ್ನಿಗೆ "ಸ್ವಾಮಿ" ಯಾದನೋರ್ವ
ಮಾಜಿ ಮುಖ್ಯಮಂತ್ರಿಯ  ಕುವರ

ಚಪಲದಿಂದ ಬಯಸಿ ನಟಿಯ
ಪಡೆಯಲವಳ ಬಳಿ ಹೇಳಿಕೊಂಡದ್ದು
ನೋಡು ನಾ ನಿನ್ನೂ "ಕುಮಾರ"

"ಕು"-ಮಾರ ಎನುವ ವಾಸ್ತವದ
ಅರಿವಿದ್ದರೂ ನಟಿಯೊಪ್ಪಲು ಕಾರಣ
ಅವನೀ ಕಾಲದ ಕುಬೇರ

ಮೊದಲಿನವಳಿಗೆ ಮಾತ್ರ ನೈತಿಕ ಹಕ್ಕು "ಸ್ವಾಮಿ" ಎಂದೆನಲು
ಮತ್ತೊಬ್ಬಳಿಗೆ ಆ ಹಕ್ಕಿಲ್ಲ; ಇವಳಿಗಿನ್ನೂ ಅವ ವೀರ "ಕುಮಾರ"
ಯಾಕೆಂದರೆ ಜಗಕಂಜದೆ ಕೊಟ್ಟನಲ್ಲ, ಮಗುವಿಗೆ ತನ್ನುತ್ತರಾರ್ಧದ ಹೆಸರ.

ಒಟ್ಟಿನಲಿ ಮೆಚ್ಚಲೇಬೇಕಾದ ತಾಕತ್ತು ಇವನದು
ಈ ರಾಜಕೀಯದ ಡೊಂಬರಾಟದ ನಡುವೆಯೂ
ಇಬ್ಬರನು ಸಂತೈಸಿ ಸಾಗಿಸಿತಿಹನಲ್ಲ ಎರಡೆರಡು ಸಂಸಾರ.

Wednesday 2 November, 2011

ಮೋಜು

ನಮಗೆ ನಡೆಯುತ್ತಿರುವುದು ಈಗ ಟೀನೇಜು
ಹಾಗಾಗಿ ಕಾಲೇಜು ಲೈಫಲ್ಲಿ ಮಾಡೋಣ ಮೋಜು
ಎಂದು ಸದಾ ಹೇಳುತಿದ್ದ ನನ್ನ ಗೆಳೆಯ ಮಂಜು
ಅದಕ್ಕವನಿಗೆ ಸಿಕ್ಕಿತು ಇನ್ನಿಬ್ಬರ ಭಾರೀ ಎನ್ಕರೇಜು
ಅಂದಿನಿಂದ ಅವರಿಗಾಯಿತು ಸಿನಿಮಾ ಟಾಕೀಸೇ ಕಾಲೇಜು
ರಿಸಲ್ಟಿನಂದು ಮಾತ್ರ ನುಡಿದರು, ಅತಿಯಾಯ್ತೇನೋ ನಮ್ಮ ಮೋಜು
ಬೇಸರದಲಿದ್ದ ಅವರೊಡನೆ ಕೇಳಿದೆ ಮುಂದೇನು ಮಾಡುವ ಅಂದಾಜು?
ಸಪ್ಪೆ ಮುಖದಲಿ ನುಡಿದರು "ವರ್ಕಿಂಗ್ ಇನ್ ದಿ ಗ್ಯಾರೇಜು"