Tuesday 30 September, 2014

ಪರಿಮಳ...



ಉರಿಸಿದ
ಊದುಬತ್ತಿಯ
ಪರಿಮಳ
ಯಾವುದೆಂದು
ತಿಳಿಯಲು
ಮೂಸಿ
ನೋಡತೊಡಗಿದೆ,.
.
.
.
.
.
.
.
ಈಗ ಮೂಗಿನ
ಮೇಲೊಂದು
ಸಣ್ಣ ಸುಟ್ಟ
ಗಾಯವಾಗಿದೆ,
ಪರಿಮಳ ಮಾತ್ರ
ಮಾಯವಾಗಿದೆ.

---ಕೆ.ಗುರುಪ್ರಸಾದ್

Monday 29 September, 2014

ಬೆಳೆ


ಹೊಳೆವ
ಮೈಯುಳ್ಳವನೇ
ಬರಬೇಕು
ಇಳೆಗೆ,
ಬೆಳೆವ
ಮನಸಿರುವ
ಬೆಳೆಗೆ.

ವಿಶ್ವ ಹೃದಯ ದಿನ


ಆಚರಿಸಲಾಗದೇ
ಒದ್ದಾಡುತ್ತಿದ್ದೇನೆ
ಗೆಳತೀ....
ಕಾರಣವ
ನಿನ್ನೆದೆಯೊಳಗೇ
ಹುಡುಕು,
ಎರಡೆರಡು
ಹೃದಯದಾ
ಬಡಿತಗಳು
ಮೆಲ್ಲನೆ
ಉತ್ತರವ
ಪಿಸುಗುಟ್ಟಿಯಾವು..

ನಮನ


ಕೊರಳ ಸುತ್ತಿಕೊಂಡ
ಹುರಿಹಗ್ಗವದು
ಹಿಸುಕಿ ಉಸಿರ
ಮೆಲ್ಲಮೆಲ್ಲನೆ
ನಿಲ್ಲಿಸುತ್ತಿದ್ದರೂ...
ತಾಯಿ ಭಾರತಿಯ
ಭಕ್ತಿ ಗೀತೆಯ
ಸ್ಪೂರ್ತಿಯ ಶ್ರುತಿಯನು
ತಪ್ಪಲು ಬಿಡಲೇ ಇಲ್ಲ....
ತಾ ಹಾಡುವುದ
ನಿಲ್ಲಿಸಿದರೂ,
ದೇಶಭಕ್ತಿಯ ಕ್ರಾಂತಿ
ಸಂಗೀತದ ಪಾಠವನು
ಭರತ ಕುವರರಿಗೆ
ಹೇಳಿಕೊಟ್ಟ ಭಗತನಿಗೆ
ನಮಿಸದಿದ್ದರೆ,
ಈ ಸ್ವಾತಂತ್ರ್ಯದ
ರುಚಿಯನನುಭವಿಸಲು
ನಮಗೆ ಯೋಗ್ಯತೆಯೇ ಇಲ್ಲ..

Monday 22 September, 2014

ಕಲ್ಲು - ಪ್ರವಾಹ




ಅಲ್ಲಿದ್ದ ಕಲ್ಲುಗಳೆಲ್ಲವನೂ
ಕೊಂಡೊಯ್ದು ಹೋಯ್ತು,
ಕಲ್ಲೆಸೆದವರ ಮನೆಯನ್ನೂ
ಕೊಚ್ಚಿಕೊಂಡೊಯ್ದದ್ದು
ಕಲ್ಲೆದೆಯ ಪ್ರವಾಹ...
ಆದರೆ......
ಕಲ್ಲೆಸೆದವರನ್ನುಳಿಸಿದ್ದು ಮಾತ್ರ
ಕಲ್ಲೇಟು ತಿಂದರೂ
ಹೃದಯವನು ಕಲ್ಲಾಗಿಸದ
ಯೋಧರು...

ಅಂಟು...



ಯಾವುದರ
ಜೊತೆಗಿರಬೇಕು....?
ಅನ್ನುವ ನಿರ್ಧಾರ
ನಮ್ಮದೇ...
ಕೊಳೆತು
ನಾರುವುದರ
ಜೊತೆಗಿದ್ದರೆ
ದುರ್ಗಂಧ..,
ಸುವಾಸನೆಯ
ಹೂಗಳ
ಜೊತೆಗಿದ್ದರೆ
ಸುಗಂಧ,
ಅದನು
ತನುವಿಗಂಟಿಸುವ
ಜವಾಬ್ದಾರಿ ಮಾತ್ರ
ಪ್ರಕೃತಿಯದು,
ಅಂಟುವುದರ ಬಗ್ಗೆ
ಸಂದೇಹ ಬೇಡ.
ಯಾಕೆಂದರೆ,
ಪ್ರಕೃತಿ ನಮ್ಮಂತೆ
ಸೋಮಾರಿಯಲ್ಲ.

ಕುಸುಮ


ನಿದಿರೆಯಾ
ಚಿಟ್ಟೆಗಾಗಿ
ಕಾಯುತಿದೆ
ನನ್ನ
ನಯನ
ಕುಸುಮ

ಪ್ರವಾಹ


ಅವಳ
ಕನಸುಗಳ
ಪ್ರವಾಹದಲಿ
ಕೊಚ್ಚಿ
ಹೋಗುತ್ತಿದ್ದರೂ.....
ನನ್ನ
ರಕ್ಷಿಸುವವರು
ಯಾರೂ
ಇಲ್ಲ

ಪ್ರಶ್ನೆ...?



ಸಾವಿನ
ಸರಮಾಲೆಯ
ಕಂಡ ಕಂಗಳು
ಹೆತ್ತ ಕಣ್ಣೀರು,
ದೇವರಸ್ತಿತ್ವವನೇ
ಪ್ರಶ್ನಿಸುವಾಗ...
ಇರುವನವನೆಂದು
ಗೊತ್ತಿರುವ
ಉತ್ತರವ
ನುಡಿಯಲು
ನಾಲಗೆಯು
ತೊದಲುವುದೇಕೆ..?

Sunday 21 September, 2014

ಜೋಕಾಲಿ


ಸುಖಗಳದ್ದೊಂದು ತುದಿ
ದುಃಖಗಳದೊಂದು ತುದಿ
ಅತ್ತಲಿಂದಿತ್ತ ,ಇತ್ತಲಿಂದತ್ತ
ತೂಗುವವ ಪರಮಾತ್ಮ
ಆ ತುದಿಯಲಿದ್ದಾಗ ನಕ್ಕು
ಈ ತುದಿಗೆ ಬಂದಾಗ ಅತ್ತು
ತೂಗಾಡುವುದೇ ಜೀವನ
ತೂಗುವುದದು ನಿಂತು
ನಡುವೆ ಸುಮ್ಮನಾಗುವುದೇ ಮರಣ

ಕವಿತೆ


ಯೋಚನೆಯ
ಆಗಸವೆಲ್ಲಾ
ಮಬ್ಬು ಮಬ್ಬು,
ಪದಪುಂಜಗಳೆಲ್ಲಾ
ಅದೆಲ್ಲೋ ಮರೆವಿನ
ಉಪ್ಪು ನೀರಿನೊಳಗೆ
ಮುಳುಗಿ ಹೋದಂತೆ
ಅನಿಸುತಿದೆ.
ಅಸೆಯೊಂದೇ...
ಕಾಲವುರುಳಿ
ಅದೆಲ್ಲಿಂದಲೋ
ಕವಿತೆಯಾ ನೇಸರ
ಮತ್ತೆ ಹುಟ್ಟಿ
ಮೇಲೆ ಬಂದಾನು...

ಆರಾಧನೆ



ತನ್ನಾರಾಧನೆಗೆ
ಹೂ ತುಳಸಿಯದು
ಬೇಕೇ ಬೇಕು
ಅನ್ನುತ್ತಾ...
ಮುಂಜಾವಿನಲಿ
ಹೂತೋಟಕೆ
ಕಳುಹಿಸಿ,
ಇಬ್ಬನಿಗಳ
ತಣ್ಣನೆಯ ಸ್ಪರ್ಶ
ಕೊಡಿಸಿದ,
ಹೂ ಚಿಪ್ಪಿನೊಳಗಣ
ನೀರ ಮುತ್ತುಗಳ
ತೋರಿಸಿ
ಮನಕಾಹ್ಲಾದ ನೀಡಿದ,
ತುಳಸಿ ತುದಿಯ
ಕಿತ್ತು ತರಲು
ಪರಿಶುದ್ಧ ಗಾಳಿಯ
ಶ್ವಾಸಕೋಶದೊಳಗಿಳಿಸಿ
ಆರೋಗ್ಯ
ಭಾಗ್ಯವನು,
ಆರಾಧನೆಯ
ಮೊದಲೇ
ದಯಪಾಲಿಸಿದ
ಆ ಭಗವಂತನಿಗಿದೋ
ನನ್ನ ಮುಂಜಾವಿನ
ಅನಂತ ನಮನ


Thursday 11 September, 2014

ಸಂಶಯ



ಸುಪ್ರಸಿದ್ಧ,
ನುರಿತ
ಪಿಟೀಲು
ವಾದಕರೆಲ್ಲಾ
ಅದ್ಯಾವ
ರಾಗದಲ್ಲಿ
.
.
.
.
.
.
.
.
.
.
.
ಹಲ್ಲುಜ್ಜುವರು....?

ಗೊಂದಲ


ಅವಳ
ಕನಸಿರುವ
ಕತ್ತಲು,
ಅವಳು
ಮರೀಚಿಕೆಯಾಗಿರುವ
ಹಗಲು,
ಯಾವುದು
ಹೆಚ್ಚು ಇಷ್ಟ..?
ಅನುವ ಗೊಂದಲ
ಬಿಡದು ನನ್ನ
ಹಗಲಿರುಳೂ..

ಮೂರ್ಛೆ..



ಇರುಳಾಘತಕೆ
ಮೂರ್ಛೆ
ಹೋದ
ಜಗವ
ಎಚ್ಚರಿಸಲು,
ರವಿಯು
ಸಿಂಪಡಿಸುತಿಹನು,
ಬೆಳಕೆನುವ
ನೀರನು..

ಭಾವ ಬರಹ...



ನನ್ನೊಳಗಿದ್ದ
ಅವಳ ಬಗೆಗಿನ
ಭಾವನೆಯನು
ಬರಹವಾಗಿಸಿ,
ಅವಳಿಗೆ ತಲುಪಿಸಿದ್ದೆ.
ಅದನು ಕಂಡ
ಅವಳ.
.
.
.
.
.
.
.
.
.
.
.
.
ಮನೆಯ ಕಸದ
ಬುಟ್ಟಿ ಮನಸಾರೆ
ಅತ್ತಿತ್ತಂತೆ..

ಒಂಟಿತನ



ನಡೆ ಗೆಳೆಯ ನೇಸರನೆ
ನಿನ್ನಂತೆ ನಾನೂ ಒಂಟಿ
ಅವಳ ನೆನಪಿನೂರುಗೋಲನೇ
ಊರೀ ಊರೀ...
ನಡುಗುವ ಹೆಜ್ಜೆಯನು
ಆಧರಿಸುತಿಹೆನು...
ಹಾಗೋ ಹೀಗೋ
ಅಂತೂ ಇನ್ನೊಂದು
ಹಗಲಿನಂತ್ಯವ ತಲುಪಿಹೆನು.

ನಿನ್ನ ನೆಲೆಯಷ್ಟು
ದೊಡ್ದದಲ್ಲವಾದರೂ
ನಾನೂ ನಿದಿರೆಯಿಲ್ಲದ
ಕತ್ತಲಿನಲಿ ನೆಲೆಸುವುದು
ಕಣ್ಣೀರ ಕಡಲಲ್ಲೇ...
ನನ್ನ ಬಿಟ್ಟು ಬಲುಬೇಗ
ಹೋದವಳ ನೆನಪಲ್ಲೇ...

ಮಹಾಗುರು...



ಪ್ರತಿದಿನವೂ
ಅದೇನನ್ನಾದರೂ
ಕಲಿಸುವ
" ಸಮಯ "
ಮತ್ತು ಅದು
ತಂದೊಡ್ಡುವ
" ಜೀವನ "
ಇವರುಗಳೇ
ನನ್ನ ಪಾಲಿನ
ದ್ರೋಣಾಚಾರ್ಯ
ಮತ್ತು
ನಾನೇ ಅವರ
ಪಾಲಿಗೆ
ಏಕಲವ್ಯ.