Monday, 22 September 2014

ಅಂಟು...



ಯಾವುದರ
ಜೊತೆಗಿರಬೇಕು....?
ಅನ್ನುವ ನಿರ್ಧಾರ
ನಮ್ಮದೇ...
ಕೊಳೆತು
ನಾರುವುದರ
ಜೊತೆಗಿದ್ದರೆ
ದುರ್ಗಂಧ..,
ಸುವಾಸನೆಯ
ಹೂಗಳ
ಜೊತೆಗಿದ್ದರೆ
ಸುಗಂಧ,
ಅದನು
ತನುವಿಗಂಟಿಸುವ
ಜವಾಬ್ದಾರಿ ಮಾತ್ರ
ಪ್ರಕೃತಿಯದು,
ಅಂಟುವುದರ ಬಗ್ಗೆ
ಸಂದೇಹ ಬೇಡ.
ಯಾಕೆಂದರೆ,
ಪ್ರಕೃತಿ ನಮ್ಮಂತೆ
ಸೋಮಾರಿಯಲ್ಲ.

1 comment:

  1. ಪ್ರಕೃತಿ ಸೋಮಾರಿಯಲ್ಲ ನಿಜವಾದ ಅಮ್ಮ.

    ReplyDelete