Thursday 30 May 2013

ಸಿಹಿ ಮುತ್ತುರವಿಕಿರಣಗಳ
ಬದಿಗೊತ್ತಿ
ಬುವಿಯ
ಮುದ್ದಿಸುತಿದೆ
ಮೋಡ..
ಮಳೆಹನಿಯ
ಸಿಹಿ ಮುತ್ತಿನಿಂದ

ಹುಡುಗಾ(ಕಾ)ಟ..

ಮೊದ ಮೊದಲ ಮಳೆಗೆ
ನೆನೆ ನೆನೆದು ಕುಣಿದು
ಒದ್ದೆಯಾಗುವ ಹುಡುಗಾಟ;
ಎರಡನೆಯ ಮಳೆಗೆ
ಕಳೆದ ವರ್ಷ ಎಸೆದು
ಬಿಟ್ಟಿದ್ದ ಕೊಡೆಯ ಹುಡುಕಾಟ.

ಚಂದಾದಾರ...

ಅವಳ ಸಿಹಿ
ಕನಸೆನುವ
ದಿನ ಪತ್ರಿಕೆಗೆ
ನಾ ಆಜೀವ
ಚಂದಾದಾರ

ತಂಗಾಳಿ...

ನಭದೂರಿನಿಂದ
ಮಳೆಹನಿಯ ದೊಡ್ಡ
ದಿಬ್ಬಣವು ಹೊರಟಿಹುದು
ಎನುವ ಸಿಹಿಸುದ್ದಿಯ,
ಬುವಿಯ ಕಿವಿಯಲ್ಲಿ
ಮೆಲ್ಲನೆ ಪಿಸುಗುಟ್ಟಿದ್ದು
ಇದೇ ತಂಗಾಳಿ...

Saturday 25 May 2013

ಅಧುನಿಕ ಮುಗ್ಧರುಕಿವಿಯಲ್ಲಿ ಇಯರ್
ಫೋನನು ತುರುಕಿಸಿ
ಹಾಡು ಕೇಳುವಾತನನು
ಕಿವುಡ ಎಂದುಕೊಳುವವರು;
ಒಂದು ಕಿವಿಯಲ್ಲೊಂದು
ಸಣ್ಣ ಸಾಧನ ಸಿಲುಕಿಸಿ
ಒಬ್ಬನೇ ತನ್ನಷ್ಟಕ್ಕೆ
ಮಾತನಾಡುತ್ತಾ
ಹೋಗುವವನನು
ಮಾನಸಿಕ ಅಸ್ವಸ್ಥ
ಎಂದೆನಿಸಿಕೊಳ್ಳುವವರು;
ಇಲೆಕ್ಟ್ರಾನಿಕ್ಸ್ ಅಂಗಡಿಯಲಿ
ಟ್ಯಾಬ್ಲೆಟ್ ಬೇಕೆಂದು
ಕೇಳಿದಾತನ ಕಂಡು
ಮುಸಿ ಮುಸಿ ನಗುವವರು.
ಇವರೇ ತಾನೇ
ಆಧುನಿಕ ಮುಗ್ಧರು

ಮುತ್ತುಹಸಿದ ನನ್ನ ಕೆನ್ನೆಗೆ
ಹಿಡಿ ಕೈ ತುತ್ತು
ನನ್ನವಳು ಕೊಡುವ
ಈ ಸಿಹಿ ಮುತ್ತು

ನಿದ್ರೆ...ಹಾಕಿಕೊಂಡು
ಕಣ್ಣಿನಂಗಡಿಗೆ
ಬೀಗ ಮುದ್ರೆ;
ಮಾಡಲು
ಹೊರಟಿರುವೆ
ಸೊಗಸಿನ ನಿದ್ರೆ.

ಗಟ್ಟಿ ಗೋಡೆ....ಬೆಂಗಳೂರನ್ನು ಸುಟ್ಟ
"ಸೂರ್ಯಂಗೆ"
"ರಾಜ"ನಾಗಿ
ದೂರದಲಿರುವ ಇಲ್ಲಿನ
ದೊಡ್ಡ "ಗೋಡೆ"ಯ
ಮೇಲೇರಿ ಬರುವುದು
ಸಾಧ್ಯವಾಗಲೇ ಇಲ್ಲ;
ಆರಾರಾರೋ..
ಆರಾರಾರೋ
ಅಂತ ಎರಡಾರು ಬಾರಿಸಿ
ಕೊನೆಯಲ್ಲಿ ಹಾಜ್
ಸಮ್ಮಿಗೆ ಜೋಗುಳ
ಹಾಡಿಯೇ ಬಿಟ್ಟನಲ್ಲ.

ಶೀರ್ಷಿಕೆ..ಅವಳ
ಹೆಸರಿನ
ನೆರಳಿನಡಿ
ಬಂದ
ಪದಗಳೆಲ್ಲಾ..
ಸುಂದರ
ಕವನದ
ಸಾಲಾಯಿತಲ್ಲ

ಕಣ್ ತೆರೆವ ಮುನ್ನ


ಮುಂಜಾನೆಯಲಿ
ನಾ ಕಣ್ ತೆರೆವ
ಮುನ್ನವೇ..ವಸುಧೆ,
ಮೋಡವೆನುವ
ಪಾತ್ರೆಯಲಿನ
ನೀರ ಸುರಿದುಕೊಂಡು
ಜಳಕವನು
ಪೂರೈಸಿಬಿಟ್ಟಿದ್ದಳು,
ಅದರಿಂದಾಗಿ
ಉಲ್ಲಸಿತಳಾಗಿ
ಮಣ್ಣಿನಾ ಕಂಪೆನುವ
ತನ್ನೊಡಲ ವಿಶಿಷ್ಟ
ಸುಗಂಧವ
ಹರಡತೊಡಗಿದ್ದಳು,
ಹಗಲಿಡೀ ತನ್ನ
ತನುವು ತಂಪಗಿರಲೆಂದು
ತಂಗಾಳಿಯೆನುವ
ಸೀರೆಯೊಂದನು
ಉಟ್ಟುಕೊಂಡು
ಮಿರಮಿರನೆ
ಮಿಂಚತೊಡಗಿದ್ದಳು

ಗಡೀಪಾರು...


ಅವಳ ಕನಸು
ನನ್ನ ಮನವೆನುವ
ರಾಜ್ಯದ ಚುಕ್ಕಾಣಿಯ
ಹಿಡಿದೊಡನೆಯೇ...
ಕಣ್ಣೀರ ಹನಿಗಳೆನುವ
ನನ್ನ ಕಣ್-ನಿವಾಸಿಗಳಿಗೆ
ಗಡೀಪಾರಿನ ಶಿಕ್ಷೆಯ
ಘೋಷಣೆಯಾಗುತ್ತದೆ.

ಉತ್ಸಾಹ...


ವಿರಹದುರಿಯ
ತಣಿಸಲು
ನಿದಿರೆಯೊಳಗಿನ
ಕನಸಲ್ಲಿ ನನ್ನಾಕೆ
ಬರುವುದರಲ್ಲಿ
ಸಂಶಯವೇ ಇಲ್ಲ ;
ಅವಳಾಗಮನದ
ಖಚಿತತೆಯಿಂದಾದ
ಅತಿಯಾದ
ಉತ್ಸಾಹದಿಂದಾಗಿ
ನನಗೆ ನಿದಿರೆಯೇ
ಬರುತಿಲ್ಲ...

Monday 20 May 2013

ದುರಂತ

ಅಧರ್ಮಿಗಳು
ಮಾಡಿ ಹೋದ
ಕ್ಷಮಿಸಲಾಗದ
ಕೆಲವು
ತಪ್ಪುಗಳಿಗೆ
ಇಂದಿಗೂ
ಸನಾತನ ಧರ್ಮ
ಅಪಹಾಸ್ಯದ
ಸೆರೆವಾಸವನು
ಅನುಭವಿಸುತಿದೆ
ಎಂದರೆ ಇದು
ದುರಂತವೇ ತಾನೇ..

ಚಂದಿರ..


ಆಗಸವನಾವರಿಸಿದ
ಆಜಾನುಬಾಹು
ಇರುಳ ರಾಜನ
ಮಿಡಿವ ಪುಟ್ಟ
ಹೃದಯ ಈ
ಪೂರ್ಣ ಚಂದಿರ.

ಸಾಲ ಮನ್ನಾ...

ಹಲವರ ಸಾಲ ಮನ್ನಾ
ಮಾಡಿದ ಓ ಸಿದ್ದರಾಮಣ್ಣ ;
ಮಾಡುವಿರಾ ನನ್ನ ಸಾಲ ಮನ್ನಾ
ನೀವು ಕುರ್ಚಿಯಿಂದಿಳಿಯುವ ಮುನ್ನ.

ಬೈರಾಗಿ...

ಅವಳಿಗಾಗಿ
ಕಾದು ಕಾದು
ಬೋರಾಗಿ,
ಗಡ್ಡ ಬೆಳೆದು
ಆಗಿ ಬಿಟ್ಟೆ
ನಾ ಬೈರಾಗಿ.

ಸಮಾಗಮ...ಬಾನ ಸಂತೆಯಲಿ
ಕಳೆದು ಹೋದ
ಶರಧಿಯ
ಮುದ್ದು ಕಂದ,
ಮತ್ತೆ ತನ್ನ ತಾಯ
ಮಡಿಲ ಸೇರಿ
ಆದ ಅಪರೂಪದ
ಸಮಾಗಮಕೆ
ಪ್ರತ್ಯಕ್ಷ ಸಾಕ್ಷಿಯಾಯಿತೇ
ಈ ಮುಸ್ಸಂಜೆ...?

ಅಮ್ಮಾ...

ನನ್ನ ಹೊತ್ತು
ಹೆತ್ತವಳ
ನಗುವಿಗಾಗಿ
ತೊದಲು
ನುಡಿಯಲಿ
ನಾನಂದ
ಮೊದಲ
ಮಾತು,
ಅಮ್ಮಾ...

ತುತ್ತು

ಕತ್ತಲೆನುವ
ಉಪವಾಸದಲಿದ್ದ
ಅಸಂಖ್ಯ
ಕಂಗಳ ಕಂಡು
ಮರುಗಿ,
ಕಡಲಾಳದಿಂದ
ತಂದಿತ್ತನೇ ರವಿ
ಬೆಳಕಿನಾ ತುತ್ತು.

ಬಯಕೆ...

ಬೆಳಕಿನಮೃತವ
ನೀಡುವವನನೇ
ಮೊದಲಾಗಿ
ನೋಡಬೇಕೆನುವ
ಬಯಕೆಯ ಹೊತ್ತು
ಅರಳ ಹೊರಟ
ಹೂವುಗಳು ತಮ್ಮ
ತಲೆಯ ಬಾಗಿಸಿತ್ತು ;
ಓ ರವಿಯೇ...
ಆ ಬಯಕೆಗಳ
ಪೂರೈಸಲೆಂದೇ
ಮದುಮಗನಂತೆ
ಸಿಂಗಾರಗೊಂಡು
ಬೆಳ್ಳಿ ಕಿರಣದ ಕೈಗಳಿಂದ
ಸುಮವೆನುವ ವಧುವಿನ
ಬಾಗಿದ ಕತ್ತನ್ನೆತ್ತು...

ವಿಧಿ ಬರಹ...

ಏಕಾಂತದ ಸರೋವರದಲ್ಲಿ
ಮೀನಾಗಿ ಹಾಯಾಗಿದ್ದ
ನನಗೆ ಇಳಿಬಿಟ್ಟ ಗಾಳವದು
ಕಾಣಿಸಲೇ ಇಲ್ಲ,
ಬರಿಯ ಅವಳ
ಮುಗುಳು ನಗೆಯೆನುವ
ಎರೆಹುಳು ಮಾತ್ರ ಕಂಡಿತ್ತು,
ಮಂಕು ಬುದ್ದಿಯ ಮಾತ
ನಾ ತಳ್ಳಿ ಹಾಕಲಿಲ್ಲ
ಬಹುಶಃ ಪ್ರೀತಿಯೆನುವ
ತೀರದಲೊಂದು ಸಣ್ಣ
ಒದ್ದಾಟ ನನ್ನ ವಿಧಿಬರಹವಾಗಿತ್ತು.

Sunday 5 May 2013

ಮೂರ್ಖತನಓ ರವಿಯೇ..
ದಿನದಾಯುವಿನ
ನಿನ್ನ ಈ
ಮುಸ್ಸಂಜೆಯೆನುವ
ಇಳಿ ವಯಸ್ಸಿನಲ್ಲಿ
ಮುಳಗಲಾರೆಯೆನುವ
ಭಂಡ ಧೈರ್ಯದಿ
ಕಡಲ ನೀರಿಗಿಳಿದದ್ದು
ಮೂರ್ಖತನದ
ಪರಮಾವಧಿಯೇ ತಾನೇ..

ರಶೀದಿ...ಪ್ರಜ್ನಾವಂತ
ಪ್ರಜೆಯಾಗಿ,
ರಾಜ್ಯದ ಹಿತವ
ಗಮನದಲಿರಿಸಿ,
ಮತದಾನ
ಮಾಡಿದುದಕಾಗಿ
ಸಿಕ್ಕ ರಶೀದಿ..
ಕೈ ಬೆರಳ
ಮೇಲಿನ ಈ
ನೀಲ ಶಾಯಿ.

ಬಂಡಾಯ...ಸೂರ್ಯನ
ಉರಿಬಿಸಿಲ
ಪ್ರಲೋಭನೆಗೆ
ಒಳಗಾಗಿ
ನನ್ನ ದೇಹವೆನುವ
ಪಕ್ಷದೊಳಗಿನ
ಬೆವರೆನುವ
ಕಾರ್ಯಕರ್ತರು
ಬಂಡಾಯದ
ರಾಗ ಹಾಡಿ
ಹೊರನಡೆಯುತ್ತಿದ್ದಾರೆ.

ನಮೋ....ತಾಕತ್ತಿದ್ದರೆ ಮಂಗಳೂರಿಗೆ
ಬನ್ನಿ, ಹೀಗಂದೊಡನೆ
ಬಂದೇ ಬಿಟ್ಟರು
ನಮ್ಮ ನರೇಂದ್ರ ಮೋದಿ;
ತಮ್ಮ ಮಾತಿನಲೇ
"ಕೈ"ಯ ಮುರಿದುದ
ಕಂಡು "ಪೂಜಾರ್ರಿ"ಗೆ
ಶುರುವಾಗಿದೆಯಂತೆ ಈಗ
ತಡೆಯಲಾಗದ ಭೇದಿ.

ಉಡುಗೊರೆ


ಬೆಳ್ಳಂಬೆಳಗ್ಗೆ ಮೋಡಗಳು
ಸುರಿಸಿದ ನೀರಿನಿಂದ
ತೋಯ್ದು ಹೋದ
ವಸುಧೆಯ ತನುವ
ನೋಡಿ ನೇಸರ
ಬೇಸರಗೊಳಲು,
ತನ್ನೊಡಲಲಿಹ
ಕ್ಷಯವಾಗದ ಬಿಸಿಲ
ಬಟ್ಟೆಯೊಂದನು ಕಿತ್ತು
ಧರೆಗುಡುಗೊರೆಯಾಗಿತ್ತ
ಮೈಯನೊರಸಿಕೊಳಲು.

ಬನ್ನಿ ಗೋರಕ್ಷಕರೇ...

ಗೆದ್ದು ಬಂದರೆ
ಗೋಹತ್ಯಾ ನಿಷೇದದ
ವಸೂದೆಯನು, ಸಿದ್ದು
ಮಾಡುವನಂತೆ ರದ್ದು ;
ಬನ್ನಿ ಗೋರಕ್ಷಕರೇ..
ನಾವೆಲ್ಲ ಒಂದಾಗಿ
ಬುದ್ದಿಯ ಕಲಿಸೋಣ
ಎದ್ದು ಇವನೆದೆಗೆ ಒದ್ದು.

ಮನಮೋಹನ...ಮತ ಯಾಚನೆಗಾಗಿ
ಬಾಯಿಗೆ ಹಾಕಿದ್ದ
ಬೀಗವನೊಡೆದು
ಮಾತನಾಡಲು
ಕರುನಾಡಿಗೆ ಬಂದ
ಮ(ಮೌ)ನ ಮೋಹನ;
ಸ್ವಂತದ ಮಾತ ಬಾರದ
ಕೀಲುಗೊಂಬೆಯನೇನು
ನೋಡುವುದು....?
ಎಂದು ಭಾವಿಸಿ
ಸಭೆಗೇ ಹೋಗಲಿಲ್ಲವಂತೆ
ಹುಬ್ಬಳ್ಳಿಯ
ಪ್ರಜ್ನಾವಂತ ಜನ.