Saturday, 25 May 2013

ಅಧುನಿಕ ಮುಗ್ಧರು



ಕಿವಿಯಲ್ಲಿ ಇಯರ್
ಫೋನನು ತುರುಕಿಸಿ
ಹಾಡು ಕೇಳುವಾತನನು
ಕಿವುಡ ಎಂದುಕೊಳುವವರು;
ಒಂದು ಕಿವಿಯಲ್ಲೊಂದು
ಸಣ್ಣ ಸಾಧನ ಸಿಲುಕಿಸಿ
ಒಬ್ಬನೇ ತನ್ನಷ್ಟಕ್ಕೆ
ಮಾತನಾಡುತ್ತಾ
ಹೋಗುವವನನು
ಮಾನಸಿಕ ಅಸ್ವಸ್ಥ
ಎಂದೆನಿಸಿಕೊಳ್ಳುವವರು;
ಇಲೆಕ್ಟ್ರಾನಿಕ್ಸ್ ಅಂಗಡಿಯಲಿ
ಟ್ಯಾಬ್ಲೆಟ್ ಬೇಕೆಂದು
ಕೇಳಿದಾತನ ಕಂಡು
ಮುಸಿ ಮುಸಿ ನಗುವವರು.
ಇವರೇ ತಾನೇ
ಆಧುನಿಕ ಮುಗ್ಧರು

No comments:

Post a Comment