Monday 28 February, 2011

AAGALILLA

ಬಿಡದೆ 
ಮಾಡಿದೆ 
ಹಲವಾರು
 ಯತ್ನವ 
ಆದರು 
ಆಗಲಿಲ್ಲ 
ನಾ, ನನ್ನ
 ಚೆಲುವೆಯ
 ಚೆಲುವ 

KAVITHE

ಮನಸೆಂಬ ಆಗಸದಲಿ
ಓಡಾಡುವ ಕಲ್ಪನೆಯೆಂಬ
ಕರಿದಾದ ದತ್ತ ಮೋಡದಿಂದ
ಕಾಗದವೆಂಬ ಭುವಿಗೆ
ಬಿದ್ದ ಪದಗಳೆಂಬ ಮಳೆ
ಹನಿಗಳಿಂದಾದ ಸುಂದರ ಕೊಳ.

VIRAHA

ಪ್ರಿಯೆ, ದಿನ ದಿನವು ಈಗೆನ್ನ 
ಸ್ಮರಣ ಶಕ್ತಿಗೆ ಹೆರಿಗೆ
ಜನುಮ ಕೊಡುವುದದು
ನಿನ್ನ ನೆನಪೆಂಬ ಕೂಸಿಗೆ
ರೋಮಾಂಚನದ ಅನುಭವ
ಆ ಕ್ಷಣ ಈ ಮೈಯೊಳಗೆ
ನಡುವೆಯೊಂದು ವಿರಹ ವೇದನೆ
ಬದಲಾಗಿ ಪ್ರಸವ ವೇದನೆಗೆ.


KATTALU

ಕವಿ ಓರ್ವ ನುಡಿದಿದ್ದನು
ಚಂದ್ರಮನು ಅಮಾವಾಸ್ಯೆಯಂದು
ತೊಟ್ಟುಕೊಳ್ಳುವ ಬಟ್ಟೆಯೇ ಕತ್ತಲು
ಹಾಗಾದರೆ ಅದೇ ಚಂದ್ರಮನು
ಹುಣ್ಣಿಮೆಯ ದಿನದಂದು 
ಬಟ್ಟೆಯ ಕಳಚಿ ಆಗುವನೇ ಬೆತ್ತಲು?



Saturday 26 February, 2011

BAA BELAKE

ಬಾ ಬೆಳಕೆ ಧರೆಗೆ,
ಜಗದಿ ಹರಡಿಹ ಕತ್ತಲೆಯ ಸಂಹರಿಸಲು ಬಾ
ಸತ್ತಂತೆ ಮಲಗಿಹ ಜನರ ನಿದಿರೆಯ ನೀಗಿಸಲು ಬಾ
ನನಸಾಗದ ಕನಸುಗಳ ಕಾಣುವವರನೆಚ್ಚರಿಸಲು ಬಾ

ಬಾ ಬೆಳಕೆ ಧರೆಗೆ,
ಅನಂತ ದಿಗಂತದ ನೀಲ ವರ್ಣವನ್ನು ತೋರಿಸಲು ಬಾ,
ದಟ್ಟ ಮೋಡಗಳ ಮಂದ ನಡಿಗೆಯ ತೋರಿಸಲು ಬಾ
ಬಾನಾಡಿಗಳ ಸ್ವಚ್ಛಂದ ಹಾರಾತಕೆ ದಾರಿ ದೀಪವಾಗಲು ಬಾ   

ಬಾ ಬೆಳಕೆ ಧರೆಗೆ,
ಮಿತಿ ಇರದ ಸಂಖ್ಯೆಯಲಿಹ ನಕ್ಷತ್ರಗಳನೋಡಿಸಲು  ಬಾ
ಬೆಳೆವೆ ಇಲ್ಲವೇ ಕ್ಷೀಣಿಸುವ ಚಂದಿರನ ಇಲ್ಲವಾಗಿಸಲು ಬಾ
ಕತ್ತಲಿಗೆ ಅಂಜಿಹ ಸೂರ್ಯನನು ಕಡಲಿಂದ ಮೇಲೆತ್ತಲು ಬಾ

ಬಾ ಬೆಳಕೆ ಧರೆಗೆ,
ಮರೆಯಿಂದಲೋ, ಶುನ್ಯದಿಂದಲೋ ನೀ ಬೇಗ ಬಾ
ಭುವಿಯಲಿಹ ಸೌಂದರ್ಯವನೆಲ್ಲ   ಆಸ್ವಾದಿಸಬೇಕೆಂಬ
ನನ್ನ ಬಯಕೆಯ ಕಮಲವನರಳಿಸಲು ಬಾ.      

CHELUVE...

ಕಾಲೇಜನು ಮುಗಿಸಿ ಹಿಡಿದಿದ್ದೆ ಮನೆಯ ದಾರಿ
ನನಗೆದುರಾಗಿ ಬರಬೇಕೇ ಓರ್ವಳು ಚೆಲುವಾದ ನಾರಿ

ಚೆಲುವಿನಲಿ ಸರಿಸಮರು ಇರಲಾರರು ಆಕೆಗೆ
ಅಪ್ಸರೆಯರು ನುಡಿಯುತ್ತಿದ್ದರು ಈ ಚೆಲುವಿಲ್ಲವೇಕೆ ನಮಗೆ

ಪರಿಚಯ ಇಲ್ಲವಾದರೂ ನನ್ನ ನೋಡಿ ನಕ್ಕಳು
ಆ ಕ್ಷಣವೇ ಆಕೆಯೆನ್ನ ಮನದ ಮನೆಯಲಿ ನಿಂತಳು

ನಾ ನಿನ್ನ ಪ್ರೀತಿಸುವೆ ಎಂದು ಹೇಳಬೇಕೆಂದುಕೊಂಡೆ
ಅದಕಾಗಿಯೇ ನಾನವಳ ಕೈಯ ಗಟ್ಟಿಯಾಗಿ ಹಿಡಿದುಕೊಂಡೆ

ಕರ್ಕಶವಾದ ಸ್ವರವೊಂದು ನನ್ನ ಕಿವಿಗೆ ಬಿತ್ತು
ಸುತ್ತಲೂ ನೋಡಿದರೆ ಗಾಢವಾದ ಕಟ್ಟಲು ಕವಿದಿತ್ತು

ನನ್ನ ಬಳಿ ಮಲಗುವ ಪಿಂಕಿ ಬೆಕ್ಕು ಮಾಡುತಿತ್ತು ಕಸರತ್ತು 
ಯಾಕೆಂದರೆ ಚೆಲುವೆಯ ಕೈಯೆಂದು ಹಿಡಿದಿದ್ದೆ ನಾನದರ ಕತ್ತು

ಅರ್ಥವಾಯ್ತು ಆಗ ನನಗೆ ಇದು ನನಸಲ್ಲ ಕನಸು
ಚೆಲುವೆಯ ಬಗೆಗೆ ಬಂತೆನಗೆ ಬರಬಾರದ ಮುನಿಸು

ಚೆಲುವೆಯನು ಮರೆತು, ಪಿಂಕಿಯನು ಬಳಿ ಕರೆದು ಹೊದಿಕೆಯನು ಹೊದ್ದೆ
ಹತ್ತು ನಿಮಿಷದಲೇ ಬಂತೆನಗೆ ಮತ್ತೊಮ್ಮೆ ನಿದ್ದೆ.  
 
 

HUCCHU MANASE..

ನಗುವು ಬರುತಿದೆ ನಿನ್ನ ಕಂಡು
ಹುಚ್ಚು ಹೆಚ್ಚಿರುವ ನನ್ನಯಾ ಮನಸೇ,
ಚಂಚಲತೆಗೆ ವಶವಾಗಿ ನೀ ಬೆಳೆಸಿಕೊಂಡೆ
ಪ್ರೇಮ ಸಾಗರದಲಿ ಈಜು ಕಲಿಯುವಾಸೆ.

ಪ್ರೇಮಿಸುವಳೆನ್ನ ಎಂಬ ಭ್ರಮೆಯು ಕಾಡಿತು
ಒಬ್ಬಾಕೆ ಆಕಸ್ಮಿಕವಾಗಿ ನೋಡಲೆರಡು ಬಾರಿ ನಿನ್ನ 
ಆ ಅಂದದ ಭ್ರಮೆಯಲಿ ಆನಂದ ಪಡೆದೆ,
ಕಳೆದೆ ಕಾಲವಾ ನೋಡುತಲಿ ಆಕೆಯ ಚೆಲುವನ್ನ

ಮೌನವ  ಭೂಷಣವಾಗಿಸಿಕೊಂಡಾಕೆ ನಿನ್ನೊಡನೆ ಮಾತನಾಡಿದಾಗ 
ನಿನ್ನ ಪ್ರೀತಿಯ ಗಿಡಕೆ ಆದಂತಾಯಿತು ನೀರಿನೆರಕ
ನೀರ ಪಡೆದ ಆ ಗಿಡವು ಹೆಮ್ಮರವಾಗಲು
ಅವಳೊಡನೆ ಏಕಾಂತ , ಆಯಿತಲ್ಲವೇ ಪ್ರೇರಕ 

ಕಣ್ತೆರೆದು ವಾಸ್ತವವನು ನೋಡೆನ್ದಾಗ ನೋಡಲಿಲ್ಲ
ಕಣ್ಣಿನ ಮೇಲೆ ನಿನಗಾಗ ಬಂದಿತ್ತು ಪ್ರೀತಿಯೆಂಬ ಪೊರೆ 
ಈ ಪೊರೆಯ ತೆಗೆಯದೆ ಇದ್ದುದಕ್ಕಾಗಿ ತಾನೇ 
ಇಂದು ಪಡೆದುದು ನೀನಾಕೆಯಿಂದ ತಿರಸ್ಕಾರ ಎಂಬ ಉಡುಗೊರೆ

ಮತಿಯು ಮಿತಿಯಲಿರದೆ   ಪ್ರೀತಿಸುವ ಈಜು
ಕಲಿತು ಪ್ರೇಮದ ಕಡಲಿನಲಿ ಮೀನಾಗ ಬಯಸಿದೆ
ಈಜು ಕಲಿಯಲಾರದೆ ನಿರಾಶೆ, ದುಃಖವೆಂಬ 
ದಡದಲಿ ಮೀನಿನಂತೆ ಒದ್ದಾಡುತ್ತಿರುವೆ, ಉಸಿರಾಡಲಾಗದೆ.    

Sunday 20 February, 2011

NAYI NANNA BEMBATTI

ಮಾವು ತಿನ್ನುವ ಆಸೆ ಅತಿಯಾಗಿ
ಕದ್ದೆ, ಮಾವಿನ ಮರವೊಂದನು ಹತ್ತಿ,
ಯಾರೂ ನೋಡಲಿಲ್ಲ ತಾನೇ
ಎಂದು ಸುತ್ತಲೂ ನೋಡಿದೆ ಕತ್ತೆತ್ತಿ

ಅಬ್ಭಾ! ನಾಯಿಯೊಂದು ಓಡಿ 
ಬರುತ್ತಿತ್ತು ಕೊಡ್ಲೆನಗೆ ಮುಕ್ತಿ,
ಇಳಿದು ಒಡ ತೊಡಗಿದೆ
ಒಂದುಗೂಡಿಸಿ ನನ್ನೆಲ್ಲ ಶಕ್ತಿ

ಸ್ವಲ್ಪ ಸಮಯದಿ ಹಿಂತಿರುಗಿ ನೋಡಿದರೆ
ನಾಯಿ ಬರುತ್ತಿರಲಿಲ್ಲ ನನ್ನ ಬೆಂಬತ್ತಿ
ಮರದ ಬುಡದಲಿ ಮಾಡುತ್ತಲಿತ್ತೆನನ್ನೋ
ಹಿಂಬದಿಯ ಒಂದು ಕಾಲನ್ನೆತ್ತಿ.

Mavu tinnuva aase atiyaagi
Kadde, maavina maravondanu hatti
Yaaru nodalilla thane 
Yendu suttalu nodide kattetti

Abba! naayiyondu odi 
Baruttittu kodalenage mukthi
Ilidu odathodgide
Ondugudisi nannella shakthi

Swalpa samayadi hintirugi nodidare
Naayi baruttiralilla nanna bembatti
Marada budadli maduttalittenanno
Himbadiya ondu kalannetthi 



Thursday 10 February, 2011

ಅವನನೇಕೆ ಪ್ರೀತಿಸುವೆ ?



ನನ್ನ  ನೀ ಆಶಿಸದೆ , ಅವನನೇಕೆ ಆಶಿಸುವೆ ?
ನನ್ನ ನೀ ನೋಡದೆ, ಅವನನೇಕೆ ನೋಡುವೆ ?
ನನ್ನ ನೀ ಪ್ರೀತಿಸದೆ, ಅವನನೇಕೆ ಪ್ರೀತಿಸುವೆ ?

ಕೋಟಿ ತಾರೆಯರ ನಡುವೆ, ಮಿಂಚುವನಂತೆ ನಾನಿಲ್ಲದಾಗ
ತಿಳಿಸಿದವು ನನಗಿದನು ಮೇಘಗಳು ನನ್ನ ಬಳಿ ಬಂದಾಗ 
ನಾನಿರಲು ಇರುವುದೇ ಇಲ್ಲ , ಹೆದರುವನೇನೋ ನನ್ನ ನೆನೆದಾಗ 

ಕಳ್ಳನವನು ದುಂಡಾಗಿ ಕಂಡರೂ ಕಣ್ಣಿಗೆ ಮುದ್ದು,
ಕೊಡುವನು ಬೆಳದಿಂಗಳನು, ನನ್ನದೇ ಬೆಳಕನು ಕದ್ದು,
ಪ್ರೀತಿಸುವೆ ಅವನನೇತಕೆ ಇದನೆಲ್ಲಾ ಅರಿತಿದ್ದು.

ಇತ್ತ ನೋಡು ಪ್ರಿಯೆ, ನಿನಗಾಗಿ ನನ್ನೇ ನಾ ಸುಟ್ಟುಕೊಂಡು
ಬೆಳಕ ನೀಡುವೆ ನಿನಗೆ, ಈ ಉರಿಯ ನೋವ ನುಂಗಿಕೊಂಡು
ಆದರು ಪ್ರೀತಿಸುವ ಹೃದಯ ಬಾರದೆ ನಿನಗೆ ನನ್ನ ಕಂಡು

ಪ್ರೀತಿಸುವೆ ಏಕೆ ಶಾಶ್ವತವಲ್ಲದ , ಕಾಂತಿ ಇಲ್ಲದ ದೇಹದವನನು
ದುಂಡು ದೇಹದ ಉಗ್ರ ಪ್ರಭೆಯುಳ್ಳ ನಾ ನಿನಗೇಕೆ ಕಾಣೆನು?
ಹೇಳು ಮಾಡಬೇಕು ನಾನೇನು? ಪ್ರೀತಿಸಲು ನನ್ನ ನೀನು.

( ಭೂಮಿ ಚಂದ್ರನನು ಪ್ರೆತಿಸುವ ವಿಷಯ ತಿಳಿದಾಗ ಸೂರ್ಯ ಭೂಮಿಗೆ ಹೇಳುವ ಮಾತು )

Nanna nee aashisade, avananeke aashisuve?
Nanna nee nodade, avananeke noduve?
Nanna nee preethisade, avananeke preethisuve?

Koti taareyara naduve minchuvananthe naanilladaaga
Tilisidavu nanagidanu meghagalu nanna bali bandaaga
Naaniralu iruvude illa , hedaruvaneno nanna nenedaaga

Kallanavanu dundaagi kandaru kannige muddu
Koduvanu beladingalanu, nannade belakanu kaddu
Preetisuve avananetake idanella aritiddu

Itta nodu priye, ninagaagi nanne naa suttukondu
Belaka needuve ninage ee uriya nova nungikondu
Aadaru pretisuva hrudaya baarade ninage nanna kandu

Preetisuve yeke shashwathavallada, kaanthiyillada dehadavananu?
Dundu dehada ugra prabheyulla naa ninageke kanenu?
Helu maadabeku naanenu? preetisalu nanna neenu. 

( Bhoomi chandrananu preethisuva vishaya tilidaga soorya bhoomige heluva maatu)




ಆಗದಿರು

ಬಂಜೆಯಾಗದಿರು ಕಲ್ಪನೆಯೇ
ನಾ ನನ್ನವಳ ಬಗೆಗೆ ಕವಿತೆ ಬರೆಯುವಾಗ
ಬರಿದಾಗದಿರು ಭಾವನೆಯೇ
ಭಾವ ಲಹರಿ ಹರಿದು ಕವಿತೆಯಾಗುವಾಗ

ನಡುಗದಿರು ನನ್ನಯಾ ತನುವೇ
ಅವಳೆದುರು ನಾ ನಿಂತು ಮಾತನಾಡುವಾಗ
ಆವರಿಸದಿರು ನನ್ನ, ಓ ಭಯವೇ
ಅವಳ ಬಗೆಗಿನ ಭಾವನೆಯ ಅವಳಲರುಹುವಾಗ

ಕೆಳರೆಪ್ಪೆಯ ಚುಂಬಿಸದಿರು ಮೇಲ್ ರೆಪ್ಪೆಯೆ
ನಾ ನನ್ನವಳ ಚೆಲುವನು ನೋಡುವಾಗ
ಶ್ರವಣ ಶಕ್ತಿಯ ಕಳಕೊಳ್ಳದಿರು ಕಿವಿಯೇ
ನಾ ನನ್ನವಳ ಇಂಪಾದ ಮಾತನಾಲಿಸುವಾಗ

ಬಾರದಿರು ನಿದಿರೆಯಾ ಅಂತ್ಯವೇ
ನನ್ನವಳ ಕನಸ ನಾ ಕಾಣುವಾಗ
ನೆನಪಿಸದಿರು ನಿಜವನು ವಾಸ್ತವವೇ
ಗಗನ ಕುಸುಮವಾಕೆ ಎಂಬುದನು ಕನಸು ಮುಗಿದಾಗ




Wednesday 2 February, 2011

BHARATHAMBEYA BAVANE

ದೇಶದೊಳು ಬಂದಾಗ ಚುನಾವಣೆ
ನಿದ್ರಿಸುವ ಪುಡಾರಿಗಳಿಗೆ ದಿನ ರಾತ್ರಿ ಜಾಗರಣೆ
ಆಗ ಮಾತ್ರ ಮಾಡುವರು ನಮ್ಮ ವಿಚಾರಣೆ
ಅವರು ಮಾಡುವ ದೌರ್ಜನ್ಯಕೆ ಎಲ್ಲಿದೆ ಎಣೆ?
ಕೇಳಲು ಬರಲಾರರು ಬಡ ಜನರ ಬವಣೆ
ದೇಶದಲ್ಲಿ ಆಗಲಿಲ್ಲ ಎಳ್ಳಷ್ಟು  ಸುಧಾರಣೆ
ಮಾತಿನಲಿ ಹಾಕುವರು ಆಶ್ವಾಸನೆಯ ಒಗ್ಗರಣೆ
ಯಾವ ಪಕ್ಷದಲು ನಾ ವ್ಯತ್ಯಾಸ ಕಾಣೆ
ತಿಳಿದೂ ತಿಳಿದೂ ಮತ ನೀಡುವ ನಮ್ಮೀ ಧೋರಣೆ
ಇವೆಲ್ಲದಕು ನಾವು ತಾನೆ ಹೊಣೆ
ಹಿಡಿಯಬೇಕಾಗಿದೆ ಜನರ ಮಂಕು ತಲೆಗೆ ಸಾಣೆ
ಇಲ್ಲವಾದಲ್ಲಿ ಭಾರತಾಂಬೆ ನಿನ್ನ ಮೇಲಾಣೆ
ಮುಂದೊಂದು ದಿನ ಭಾರತದ ನಕ್ಷೆಯನು ಭೂ ಪಟದಲಿ ನಾ ಕಾಣೆ 

Deshadolu bandaga chunavane
nidrisuva pudarigalige dina raathri jagarane
aaga mathra maduvaru namma vicharane
avaru maaduva dourjanyake yellide yene?
kelalu baralaararu bada janara bavane
deshadalli aagalilla yellashtu sudharane
maathinali haakuvaru aashwasaneya oggarane
yaava pakshadalu vyathyaasa na kane
tilidoo tilidoo matha niduva nammee dhorane
ivelladakoo navu thane hone
hidiyabekaagide janara manku thalege saane
illavadalli bharathambe ninna melaane
mundondu dina bharathada naksheyanu bhoo patadali naakaane.