Saturday, 26 February 2011

HUCCHU MANASE..

ನಗುವು ಬರುತಿದೆ ನಿನ್ನ ಕಂಡು
ಹುಚ್ಚು ಹೆಚ್ಚಿರುವ ನನ್ನಯಾ ಮನಸೇ,
ಚಂಚಲತೆಗೆ ವಶವಾಗಿ ನೀ ಬೆಳೆಸಿಕೊಂಡೆ
ಪ್ರೇಮ ಸಾಗರದಲಿ ಈಜು ಕಲಿಯುವಾಸೆ.

ಪ್ರೇಮಿಸುವಳೆನ್ನ ಎಂಬ ಭ್ರಮೆಯು ಕಾಡಿತು
ಒಬ್ಬಾಕೆ ಆಕಸ್ಮಿಕವಾಗಿ ನೋಡಲೆರಡು ಬಾರಿ ನಿನ್ನ 
ಆ ಅಂದದ ಭ್ರಮೆಯಲಿ ಆನಂದ ಪಡೆದೆ,
ಕಳೆದೆ ಕಾಲವಾ ನೋಡುತಲಿ ಆಕೆಯ ಚೆಲುವನ್ನ

ಮೌನವ  ಭೂಷಣವಾಗಿಸಿಕೊಂಡಾಕೆ ನಿನ್ನೊಡನೆ ಮಾತನಾಡಿದಾಗ 
ನಿನ್ನ ಪ್ರೀತಿಯ ಗಿಡಕೆ ಆದಂತಾಯಿತು ನೀರಿನೆರಕ
ನೀರ ಪಡೆದ ಆ ಗಿಡವು ಹೆಮ್ಮರವಾಗಲು
ಅವಳೊಡನೆ ಏಕಾಂತ , ಆಯಿತಲ್ಲವೇ ಪ್ರೇರಕ 

ಕಣ್ತೆರೆದು ವಾಸ್ತವವನು ನೋಡೆನ್ದಾಗ ನೋಡಲಿಲ್ಲ
ಕಣ್ಣಿನ ಮೇಲೆ ನಿನಗಾಗ ಬಂದಿತ್ತು ಪ್ರೀತಿಯೆಂಬ ಪೊರೆ 
ಈ ಪೊರೆಯ ತೆಗೆಯದೆ ಇದ್ದುದಕ್ಕಾಗಿ ತಾನೇ 
ಇಂದು ಪಡೆದುದು ನೀನಾಕೆಯಿಂದ ತಿರಸ್ಕಾರ ಎಂಬ ಉಡುಗೊರೆ

ಮತಿಯು ಮಿತಿಯಲಿರದೆ   ಪ್ರೀತಿಸುವ ಈಜು
ಕಲಿತು ಪ್ರೇಮದ ಕಡಲಿನಲಿ ಮೀನಾಗ ಬಯಸಿದೆ
ಈಜು ಕಲಿಯಲಾರದೆ ನಿರಾಶೆ, ದುಃಖವೆಂಬ 
ದಡದಲಿ ಮೀನಿನಂತೆ ಒದ್ದಾಡುತ್ತಿರುವೆ, ಉಸಿರಾಡಲಾಗದೆ.    

2 comments: