Friday, 30 January, 2015

ವಿವೇಕ-ಆನಂದ


ನಿನ್ನಣಿಮುತ್ತುಗಳ
"ವಿವೇಕ"ಯುತವಾಗಿ
ಅರ್ಥೈಸಿ
ಮನದಾಳದಲಿ
ಭದ್ರವಾಗಿರಿಸಿ,
ತೋರ್ಬೆರಳ ನೀಟಿ
ನೀ ತೋರಿದ
ಹಾದಿಯಲೇ
ಸಾಗಿದರೆ ಸಾಕು
ಭಾರತೀಯರೆಲ್ಲರಿಗೂ
ಭಾರತಮಾತೆಗೂ
"ಆನಂದ"ವೇ...

ಮೇ-ಕಪ್ಪು


ಮೊಗವ
ಸಿಂಗರಿಸಿಕೊಳ್ಳುವ
ಮೇಕಪ್ಪು ಸೆಟ್
ಕೊಂಡುಕೊಂಡಾಕೆ
ಪತ್ನಿಯಾದರೂ...
ಬಿಲ್ ಕಟ್ಟುವಾಗ
ಪತಿರಾಯರ
ಮುಖ ಪೂರ್ತಿ
ಕಪ್ಪು ಕಪ್ಪಾಗಿತ್ತು

ಆಸೆ..


ಇಡಿಯ ದಿನದಲಿ
ನಿನ್ನ ನೋಡುವಷ್ಟು
ಗಳಿಗೆಯ ಕಾಲು
ಭಾಗದಷ್ಟಾದರೂ
ನನ್ನ ಅವಳು
ನೋಡಲಿ..
ಎನುವುದೇ
ನನ್ನ ಆಸೆ
.
.
.
.
.
.
.
.
ಓ ಕನ್ನಡಿಯೇ...

ನಿಸ್ಸೀಮ...


ಗೆಳತೀ..
ಬರಿಯ
ನಿನ್ನ ಸುಖದ
ಸಂಕಲ್ಪಕೆ
ಬದ್ಧನಾದ
ದಿನದಿಂದ,
ನನ್ನ ಕಣ್ಣೀರ
ನದಿಗಣೆಕಟ್ಟು
ಕಟ್ಟುವುದರಲಿ
ನಿಸ್ಸೀಮನಾಗಿದ್ದೇನೆ.

ಹಾರ


ಪ್ರತಿ ಇರುಳಲಿ
ಸುರಿಯುವ
ನನ್ನ ಕಣ್ಣೀರ
ಮುತ್ತುಗಳ
ನಾ ಪೋಣಿಸುವುದಿಲ್ಲ
ಅವಳ
ಕೊರಳಲಿರುವ
ಅವನಿತ್ತ
ಬಂಗಾರದೊಡವೆಗಳಿಗೆ
ಇದು ಸರಿಸಾಟಿಯಲ್ಲಾ

ತಳಮಳ


ನನ್ನೊಳಗಿನ
ತಳಮಳವನ್ನೆಲ್ಲಾ
ತಾನೇ
ಖುದ್ದು
ನೋಡಬೇಕೆಂದೇ
ಏನೋ
ಅವಳು
ನೆನಪಾಗಿ
ನನ್ನೊಳಗಿಳಿಯುವುದು

ಪ್ರೇಮ ವೈಫಲ್ಯ


ನನ್ನ ಯೋಗ್ಯತೆಗೂ
ಮೀರಿದ್ದು ಸಿಕ್ಕಿತೆನುವಾಗ
ನಾ ಪಡಬಹುದಾಗಿದ್ದ
ಖುಷಿಗಿಂತ..
ನನ್ನ ಯೋಗ್ಯತೆಗಿಂತ
ಇಷ್ಟು ಕೆಳಮಟ್ಟದ್ದು
ನನಗೇಕೆ...?
ಎನುವ ಅವಳ
ಬೇಸರವೇ
ಜಾಸ್ತಿಯಾಗಿ
ಕಂಡಿತಂತೆ
ಭಗವಂತನಿಗೆ
ಅದಕಾಗೇ ಆತ
ನನಗೂ ಅವಳಿಗೂ
ಪ್ರೇಮದ ನಂಟನು
ಕೊಡಲೇ ಇಲ್ಲ
ಇದು ನನ್ನ
ಪ್ರಾರ್ಥನೆಯ ಸೋಲಲ್ಲ
ಅವಳ ಭಕ್ತಿಯ
ಗೆಲುವು.

ಭೇಟಿ


ಗೆಳತೀ
ಬರುವ ತಿಂಗಳು
ಭೇಟಿಯಾಗೋಣ...
ಈ ವಿರಹದ ವೇದನೆಯನ್ನ
ಸಹಿಸುವ ಶಕ್ತಿ
ಈ ಹೃದಯಕ್ಕಿದೆ
ಆದರೆ ನಿನ್ನ
ಶಾಪಿಂಗಿನ
ಖರ್ಚು ಸಹಿಸುವ
ಶಕ್ತಿ ಮಾಸಾಂತ್ಯದ
ಉಪವಾಸದಲ್ಲಿರುವ
ನನ್ನ ಪರ್ಸಿಗಿಲ್ಲ

ಟೆಕ್ನಿಕಲ್ ವಿರಹ


ಅವಳ
ಹೃದಯದಾ
ಕಂಪ್ಯೂಟರಿನಿಂದ
ಬರಿಯ
ಡಿಲೀಟ್
ಮಾಡಿದ್ದರೆ,
ಮತ್ತೆ
ಕರೆಸಿಕೊಂಡಾಳು
ಎಂದು
ರೀಸೈಕಲ್
ಬಿನ್ನಿನಲೇ
ಆಸೆ ಕಂಗಳಿಂದ
ಕಾದು
ಕುಳಿತುಕೊಳ್ಳಬಹುದಿತ್ತು
ನನ್ನ
ದುರಾದೃಷ್ಟ,..
ಆಕೆ ಶಿಫ್ಟ್ ಡಿಲೀಟ್
ಮಾಡಿಬಿಟ್ಟಿದ್ದಳು.

ಮುಳುಗಬೇಕು


ಜಗದ ಜನಜಂಗುಳಿಯ
ಆಗಸದ ಸಹವಾಸ ಸದ್ಯಕ್ಕೆ ಸಾಕು
ಮುಳುಗಬೇಕು ನಾನೀಗ
ಏಕಾಂತದ ಕಡಲಿನಲ್ಲಿ
ನನ್ನವಳ ನೆನಪಿನಲ್ಲಿ

ಕಂಪನ...


ಮದುವೆಯ ಮೊದಲು
ನನ್ನಾಕೆ ಬಳಿ
ಬರುತ್ತಿದ್ದಾಗ
ನನ್ನ ಹೃದಯ
ಕಂಪಿಸುತ್ತಿತ್ತು.
ಮದುವೆಯಾಗಿ
ವರ್ಷ ಕಳೆದಾಗಿದೆ.
ಈಗ ನನ್ನಾಕೆ ಬಳಿ
ಬರುವಾಗ
ನನ್ನ ಜೊತೆ
ಭೂಮಿಯೂ
ಕಂಪಿಸುತ್ತದೆ.

ಶೇಪುಕಾಮನ ಬಿಲ್ಲಿನಂಥೆ
ಅವಳ ಕಣ್ಣಿನ ಹುಬ್ಬು..
ಅದೇ ಶೇಪಿನಲಿದೆ
ನನ್ನ ಹೊಟ್ಟೆಯ ಕೊಬ್ಬು

ಪ್ರೇಮಾಸ್ತ...


ಕಡಲ ತೀರದಲಿ
ಬೆಸೆದ ಕೈಬೆರಳುಗಳಲೇ
ಜೊತೆ ಸಾಗುತ್ತಿದ್ದ
ಅವಳ " ಅವನ"
ಜೊತೆಗಿನ ಪಯಣ ;
ತೀರಕೆ ಬರುತಿದ್ದ
ತೆರೆಗಳ ನೀರಿನ
ಎರೆಚಾಡುವಿಕೆಯ
ಅವರೊಳಗಿನ ಆಟ,
ನನಗಿಂತಲೂ
ಅವನೇ ಉತ್ತಮನೆನುವ
ಅವಳ ನಿರ್ಣಯ,
ಆ ನಿರ್ಣಯವೇ
ಅವನಿಗಾಗಿ
ಹೊರಚೆಲ್ಲುತ್ತಿದ್ದ
ಪ್ರೇಮರಸಭಾವ
ಇವೆಲ್ಲವನೂ ಕಂಡ
ನಾ..., ಇನ್ಯಾಕೆ
ಪ್ರೀತಿಯಾಗಸದಲಿರಲಿ...?
ಹರಿಸಿ ಕಣ್ಣೀರ
ತೆರೆಯಾಗಿಸಿ
ನನ್ನ ಮತ್ತವಳ
ಹಿಂದಿನ ಜೊತೆ
ಹೆಜ್ಜೆಗಳ ಮೆಲ್ಲನೊರಸಿ
ಹಾಗೇಯೇ ಸದ್ದಿಲ್ಲದೇ
ನಗುವಿನಾ ಲೋಕದಿಂದ
ಅಸ್ತಂಗತನಾಗಿಬಿಡಲೇ...?
ವಿರಹದಾ ಲೋಕದಲಿ
ಹುಟ್ಟಿ ಬರುವುದಕಾಗಿ.

Tuesday, 20 January, 2015

ಕಣ್ಣೀರ ಕೊಡ


ನನ್ನ ಕಣ್ಣೀರನು
ನನ್ನೀ ಕಂಗಳಿಂದ
ಕೀಳಲೇಬೇಕೆಂದು...
ತನ್ನ ವಿವಾಹಕ್ಕೆ
ಆಹ್ವಾನಿಸಿದ್ದ
ನನ್ನ ಮಾಜಿ ಪ್ರೇಯಸಿಗೆ
ಮದುವೆಯ ದಿನವೇ
ಅಚ್ಚರಿ ಕಾದಿತ್ತು,
ಅವಳ ಗೆಳತಿಯರೊಂದಿಗಿನ
ನನ್ನ ಸಲುಗೆಯ
ಮಾತುಕತೆ
ಅವಳ ಕಣ್ನನ್ನೇ
ತೇವಗೊಳಿಸಿತ್ತು..
.
.
.
ಬರಿಯ ಅಷ್ಟಾಗಿದ್ದಿದ್ದರೆ
ಸಹಿಸಿಕೊಳ್ಳುತ್ತಿದ್ದಳೇನೋ,
ಕೊನೆಯಲ್ಲಿ
ಊಟದ ಹೊತ್ತಿನಲಿ
ಮತ್ತೆ ಮತ್ತೆ
ಬಡಿಸಿಕೊಂಡು
ಪಾಯಸವ ನಾ ಚಪ್ಪರಿಸಿ
ತಿನ್ನುವುದ ಕಂಡಾಗ ಮಾತ್ರ..
ಅವಳ ಕಣ್ಣೀರ ಕೊಡ
ತುಳುಕಿಯೇ ಬಿಟ್ಟಿತ್ತು.