Friday, 30 January 2015

ಪ್ರೇಮ ವೈಫಲ್ಯ


ನನ್ನ ಯೋಗ್ಯತೆಗೂ
ಮೀರಿದ್ದು ಸಿಕ್ಕಿತೆನುವಾಗ
ನಾ ಪಡಬಹುದಾಗಿದ್ದ
ಖುಷಿಗಿಂತ..
ನನ್ನ ಯೋಗ್ಯತೆಗಿಂತ
ಇಷ್ಟು ಕೆಳಮಟ್ಟದ್ದು
ನನಗೇಕೆ...?
ಎನುವ ಅವಳ
ಬೇಸರವೇ
ಜಾಸ್ತಿಯಾಗಿ
ಕಂಡಿತಂತೆ
ಭಗವಂತನಿಗೆ
ಅದಕಾಗೇ ಆತ
ನನಗೂ ಅವಳಿಗೂ
ಪ್ರೇಮದ ನಂಟನು
ಕೊಡಲೇ ಇಲ್ಲ
ಇದು ನನ್ನ
ಪ್ರಾರ್ಥನೆಯ ಸೋಲಲ್ಲ
ಅವಳ ಭಕ್ತಿಯ
ಗೆಲುವು.

1 comment:

  1. ದೇವನೂ ನಾರೀ ಪಕ್ಷಪಾತಿಯೇ? ಅಕಟಾಕಟ!

    ReplyDelete