ಕಡಲ ತೀರದಲಿ
ಬೆಸೆದ ಕೈಬೆರಳುಗಳಲೇ
ಜೊತೆ ಸಾಗುತ್ತಿದ್ದ
ಅವಳ " ಅವನ"
ಜೊತೆಗಿನ ಪಯಣ ;
ತೀರಕೆ ಬರುತಿದ್ದ
ತೆರೆಗಳ ನೀರಿನ
ಎರೆಚಾಡುವಿಕೆಯ
ಅವರೊಳಗಿನ ಆಟ,
ನನಗಿಂತಲೂ
ಅವನೇ ಉತ್ತಮನೆನುವ
ಅವಳ ನಿರ್ಣಯ,
ಆ ನಿರ್ಣಯವೇ
ಅವನಿಗಾಗಿ
ಹೊರಚೆಲ್ಲುತ್ತಿದ್ದ
ಪ್ರೇಮರಸಭಾವ
ಇವೆಲ್ಲವನೂ ಕಂಡ
ನಾ..., ಇನ್ಯಾಕೆ
ಪ್ರೀತಿಯಾಗಸದಲಿರಲಿ...?
ಹರಿಸಿ ಕಣ್ಣೀರ
ತೆರೆಯಾಗಿಸಿ
ನನ್ನ ಮತ್ತವಳ
ಹಿಂದಿನ ಜೊತೆ
ಹೆಜ್ಜೆಗಳ ಮೆಲ್ಲನೊರಸಿ
ಹಾಗೇಯೇ ಸದ್ದಿಲ್ಲದೇ
ನಗುವಿನಾ ಲೋಕದಿಂದ
ಅಸ್ತಂಗತನಾಗಿಬಿಡಲೇ...?
ವಿರಹದಾ ಲೋಕದಲಿ
ಹುಟ್ಟಿ ಬರುವುದಕಾಗಿ.
No comments:
Post a Comment