Tuesday, 20 January 2015

ಕಣ್ಣೀರ ಕೊಡ


ನನ್ನ ಕಣ್ಣೀರನು
ನನ್ನೀ ಕಂಗಳಿಂದ
ಕೀಳಲೇಬೇಕೆಂದು...
ತನ್ನ ವಿವಾಹಕ್ಕೆ
ಆಹ್ವಾನಿಸಿದ್ದ
ನನ್ನ ಮಾಜಿ ಪ್ರೇಯಸಿಗೆ
ಮದುವೆಯ ದಿನವೇ
ಅಚ್ಚರಿ ಕಾದಿತ್ತು,
ಅವಳ ಗೆಳತಿಯರೊಂದಿಗಿನ
ನನ್ನ ಸಲುಗೆಯ
ಮಾತುಕತೆ
ಅವಳ ಕಣ್ನನ್ನೇ
ತೇವಗೊಳಿಸಿತ್ತು..
.
.
.
ಬರಿಯ ಅಷ್ಟಾಗಿದ್ದಿದ್ದರೆ
ಸಹಿಸಿಕೊಳ್ಳುತ್ತಿದ್ದಳೇನೋ,
ಕೊನೆಯಲ್ಲಿ
ಊಟದ ಹೊತ್ತಿನಲಿ
ಮತ್ತೆ ಮತ್ತೆ
ಬಡಿಸಿಕೊಂಡು
ಪಾಯಸವ ನಾ ಚಪ್ಪರಿಸಿ
ತಿನ್ನುವುದ ಕಂಡಾಗ ಮಾತ್ರ..
ಅವಳ ಕಣ್ಣೀರ ಕೊಡ
ತುಳುಕಿಯೇ ಬಿಟ್ಟಿತ್ತು.

1 comment:

  1. ಆದರೂ ಹೀಗಾಗಬಾರದಿತ್ತು ಆಕೆಗೆ!

    ReplyDelete