ತನ್ನಾರಾಧನೆಗೆ
ಹೂ ತುಳಸಿಯದು
ಬೇಕೇ ಬೇಕು
ಅನ್ನುತ್ತಾ...
ಮುಂಜಾವಿನಲಿ
ಹೂತೋಟಕೆ
ಕಳುಹಿಸಿ,
ಇಬ್ಬನಿಗಳ
ತಣ್ಣನೆಯ ಸ್ಪರ್ಶ
ಕೊಡಿಸಿದ,
ಹೂ ಚಿಪ್ಪಿನೊಳಗಣ
ನೀರ ಮುತ್ತುಗಳ
ತೋರಿಸಿ
ಮನಕಾಹ್ಲಾದ ನೀಡಿದ,
ತುಳಸಿ ತುದಿಯ
ಕಿತ್ತು ತರಲು
ಪರಿಶುದ್ಧ ಗಾಳಿಯ
ಶ್ವಾಸಕೋಶದೊಳಗಿಳಿಸಿ
ಆರೋಗ್ಯ
ಭಾಗ್ಯವನು,
ಆರಾಧನೆಯ
ಮೊದಲೇ
ದಯಪಾಲಿಸಿದ
ಆ ಭಗವಂತನಿಗಿದೋ
ನನ್ನ ಮುಂಜಾವಿನ
ಅನಂತ ನಮನ
ಓಹೋ ನಿಮ್ಮ ಆರೋಗ್ಯದ ಗುಟ್ಟು ಇದೋ?
ReplyDelete