ಕೊರಳ ಸುತ್ತಿಕೊಂಡ
ಹುರಿಹಗ್ಗವದು
ಹಿಸುಕಿ ಉಸಿರ
ಮೆಲ್ಲಮೆಲ್ಲನೆ
ನಿಲ್ಲಿಸುತ್ತಿದ್ದರೂ...
ತಾಯಿ ಭಾರತಿಯ
ಭಕ್ತಿ ಗೀತೆಯ
ಸ್ಪೂರ್ತಿಯ ಶ್ರುತಿಯನು
ತಪ್ಪಲು ಬಿಡಲೇ ಇಲ್ಲ....
ತಾ ಹಾಡುವುದ
ನಿಲ್ಲಿಸಿದರೂ,
ದೇಶಭಕ್ತಿಯ ಕ್ರಾಂತಿ
ಸಂಗೀತದ ಪಾಠವನು
ಭರತ ಕುವರರಿಗೆ
ಹೇಳಿಕೊಟ್ಟ ಭಗತನಿಗೆ
ನಮಿಸದಿದ್ದರೆ,
ಈ ಸ್ವಾತಂತ್ರ್ಯದ
ರುಚಿಯನನುಭವಿಸಲು
ನಮಗೆ ಯೋಗ್ಯತೆಯೇ ಇಲ್ಲ..
ಮರೆತಿರುವ ನಮ್ಮಂತಹ ಕುರುಡರಿಗೆ ಭಗತ್ ಅವರೊಡನೆ ಇನ್ನಿತರ ಹುತಾತ್ಮ ಹೋರಾಟಗಾರರ ಕ್ಷಮೆ ಇರಲಿ! :(
ReplyDelete