ಒಂಟಿತನ
ನಡೆ ಗೆಳೆಯ ನೇಸರನೆ
ನಿನ್ನಂತೆ ನಾನೂ ಒಂಟಿ
ಅವಳ ನೆನಪಿನೂರುಗೋಲನೇ
ಊರೀ ಊರೀ...
ನಡುಗುವ ಹೆಜ್ಜೆಯನು
ಆಧರಿಸುತಿಹೆನು...
ಹಾಗೋ ಹೀಗೋ
ಅಂತೂ ಇನ್ನೊಂದು
ಹಗಲಿನಂತ್ಯವ ತಲುಪಿಹೆನು.
ನಿನ್ನ ನೆಲೆಯಷ್ಟು
ದೊಡ್ದದಲ್ಲವಾದರೂ
ನಾನೂ ನಿದಿರೆಯಿಲ್ಲದ
ಕತ್ತಲಿನಲಿ ನೆಲೆಸುವುದು
ಕಣ್ಣೀರ ಕಡಲಲ್ಲೇ...
ನನ್ನ ಬಿಟ್ಟು ಬಲುಬೇಗ
ಹೋದವಳ ನೆನಪಲ್ಲೇ...
No comments:
Post a Comment