Thursday, 10 November 2011

ವೀರ "ಕುಮಾರ"

ಎಲ್ಲರೆದುರು ಮದುವೆಯಾಗಿ
ಪತ್ನಿಗೆ "ಸ್ವಾಮಿ" ಯಾದನೋರ್ವ
ಮಾಜಿ ಮುಖ್ಯಮಂತ್ರಿಯ  ಕುವರ

ಚಪಲದಿಂದ ಬಯಸಿ ನಟಿಯ
ಪಡೆಯಲವಳ ಬಳಿ ಹೇಳಿಕೊಂಡದ್ದು
ನೋಡು ನಾ ನಿನ್ನೂ "ಕುಮಾರ"

"ಕು"-ಮಾರ ಎನುವ ವಾಸ್ತವದ
ಅರಿವಿದ್ದರೂ ನಟಿಯೊಪ್ಪಲು ಕಾರಣ
ಅವನೀ ಕಾಲದ ಕುಬೇರ

ಮೊದಲಿನವಳಿಗೆ ಮಾತ್ರ ನೈತಿಕ ಹಕ್ಕು "ಸ್ವಾಮಿ" ಎಂದೆನಲು
ಮತ್ತೊಬ್ಬಳಿಗೆ ಆ ಹಕ್ಕಿಲ್ಲ; ಇವಳಿಗಿನ್ನೂ ಅವ ವೀರ "ಕುಮಾರ"
ಯಾಕೆಂದರೆ ಜಗಕಂಜದೆ ಕೊಟ್ಟನಲ್ಲ, ಮಗುವಿಗೆ ತನ್ನುತ್ತರಾರ್ಧದ ಹೆಸರ.

ಒಟ್ಟಿನಲಿ ಮೆಚ್ಚಲೇಬೇಕಾದ ತಾಕತ್ತು ಇವನದು
ಈ ರಾಜಕೀಯದ ಡೊಂಬರಾಟದ ನಡುವೆಯೂ
ಇಬ್ಬರನು ಸಂತೈಸಿ ಸಾಗಿಸಿತಿಹನಲ್ಲ ಎರಡೆರಡು ಸಂಸಾರ.

No comments:

Post a Comment