Thursday, 26 December 2013

ಹಸಿರು...



ಅವಳ
ನೆನಪಿನ
ನದಿಯು
ನನ್ನ
ಹೃದಯದ
ಬಯಲಲಿ
ಬತ್ತದೆಯೇ.
ನೋವಿನ
ಹಸಿರೆಂತು
ಒಣಗೀತು...?

ಅಟಲರಿಗೊಂದು ನಮನ...



ನಾಲಗೆಯಲಿ ವಾಗ್ಝರಿಯ ಗಂಗೋತ್ರಿ,
ಮನಸಿನಲೊಂದು ಕವಿಭಾವದ ಕಡಲು
ಕಂಗಳಲಿ ಬರಿಯ ಭವ್ಯ ಭಾರತದ ಕನಸು
ಹೃದಯದಲಿ ತಾಯಿ ಭಾರತಿಗೊಂದು ಗರ್ಭಗುಡಿ
ನಿಲುವಿನಲಿ ಸಭ್ಯತೆಯ ರಾಜ ಗಾಂಭೀರ್ಯ
ರಾಜಕೀಯದ ಕೆಸರಿನಲರಳಿದ " ಕಮಲ "
ಅವರೇ ಅಜಾತಶತ್ರು ನಮ್ಮ ನೆಚ್ಚಿನ " ಅಟಲ "

ನಿರಾಳ...



ಭಾವಾಭಿವ್ಯಕ್ತಿಗೆ
ಹಲವು
ಮಾರ್ಗಗಳಿದ್ದರೂ
ನನ್ನೀ ಕವಿಮನಕ್ಕೆ
ನಿರಾಳತೆಯ
ಅನುಭವವಾಗುವುದು
ಭಾವನೆಗಳು
ಹಾಳೆಯ ಮೇಲಿನ
ಪದಗಳಾದಾಗಲೇ..

ಮೌನ



ಅವಳು ತೊರೆದು
ಹೋದ ನನ್ನ
ಹೃದಯದ
ಮನೆಯಲ್ಲೀಗ
ಸ್ಮಶಾನ ಮೌನ

ಬೆರಗು



ಸುತ್ತಲೂ ಹರಡಿದ್ದ
ಕತ್ತಲಿಗೆ ಹೆದರಿ
ಅಡಗಿ ಕುಳಿತಿದ್ದ ರವಿ,
ಹಿಡಿದು ಕಡಲ ತಾಯಿಯ
ನೀಲಿ ಸೀರೆಯ ಸೆರಗು ;
ಕತ್ತಲು ಮೆಲ್ಲಗೆ ಮರೆಯಾಗೆ
ಆ ಸೆರಗ ಮುಸುಕನು ಸರಿಸಿ
ಹೊರಬರುವ ನೇಸರ
ತನ್ನೊಡಲ ಬೆಳ್ಳಿಕಿರಣದ
ರೋಮಗಳ ತೋರಿಸೆ
ಜಗಕ್ಕೆಲ್ಲಾ ಬೆರಗು...

ನಾಂದಿ...



ಕವಿದ
ಇರುಳ
ಸೋಲಿಗೆ
ನಾಂದಿ
ಹಾಡುತಿವೆ
ಹಕ್ಕಿಗಳು

ಏಕಾಂತ...



ಅವಳ/ನ
ನೆನಪುಗಳಿಗಿಂತಲೂ
ಅತಿಯಾಗಿ
ಹೆಚ್ಚಿನವರೆಲ್ಲರನು
ಏಕಾಂತದಲಿ
ಕಾಡುವುದು
.
.
.
.
.
.
.
.
ತುರಿಕೆ.