maunada mathu
Saturday, 29 March 2014
ಜ್ಞಾನ
ಜ್ಞಾನವೂ
ಸಾಗರದಂತೆ...
ಅದರೆಡೆಗೆ
ಬರುವವರೆಲ್ಲರಿಗೂ
ಇನ್ನಿಲ್ಲದಷ್ಟು
ಉಣಬಡಿಸುವ
ಶಕ್ತಿ ಇದ್ದರೂ,
ಬರುವವನ
ಯೋಗ್ಯತೆಯ
ಬೊಗಸೆಯೊಳಗೆ
ಹಿಡಿಸುವಷ್ಟನ್ನೇ
ಬಿಟ್ಟುಕೊಡುತ್ತದೆ.
ನೆಮ್ಮದಿ..
ಅವಳ
ಮಂದಹಾಸದ
ನೋಟದ
ಗೂಟಕ್ಕೆ
ಕಟ್ಟಿಹಾಕಲ್ಪಟ್ಟಿರುವ
ಪ್ರೀತಿಯ
ಕನಸೆನುವ
ಹಸುವೊಂದು
ನನ್ನೆದೆಯಲಿ
ಹುಲುಸಾಗಿ
ಬೆಳೆದಿದ್ದ
ನೆಮ್ಮದಿಯ
ಮೇಯುತಿದೆ.
ಬಯಲು...
ರಾತ್ರಿ ಪೂರ್ತಿ
ಶರಧಿಯೊಳಗೆ
ಮುಳುಗಿದ್ದ
ನೇಸರ
ಹೇಗೆ ಅರಿತನೋ...?
ಮುಂಜಾನೆಯಲಿ
ಮೇಲೆದ್ದವನೇ
ಬೆಳಕ ರಹಸ್ಯವ
ಬಯಲು
ಮಾಡಿಬಿಟ್ಟ
ಚಪ್ಪಲಿ
ದೇವಳಕೆ
ಬರುವಾಗ
ಕಾಲಲಿದ್ದ
ಚಪ್ಪಲಿ..
ಒಳಹೊಕ್ಕು
ಪ್ರದಕ್ಷಿಣೆ
ಬರುವಾಗ
ಕಾಲಲ್ಲಿರಲಿಲ್ಲ.
ಅಲ್ಲಡ್ಡ ಬಿದ್ದು
ಹೊರಗೆ
ಬಂದದನು
ಕಾಣುವವರೆಗೂ..
ಅದು ಅವನ
"ತಲೆ"ಯಲಿತ್ತು.
ಶಿಶುಪಾಲ
ನಾವೆಲ್ಲರೂ
ಶಿಶುಪಾಲರೇ..
ತಪ್ಪುಗಳರಿವಿದ್ದೂ
ಒಂದರ ಮೇಲೊಂದು
ತಪ್ಪ ಮಾಡುತ್ತಲೇ
ಸಾಗುತ್ತೇವೆ..
ಸಾವಿನ ಶಿಕ್ಷೆ
ಸಿಗುವವರೆಗೆ;
ವ್ಯತ್ಯಾಸ ಎನುವುದೊಂದೇ,
ಅವನಿಗೆಷ್ಟು ತಪ್ಪಿನ
ಕ್ಷಮೆ ಎನುವುದು
ಗೊತ್ತಿತ್ತು...
ಅದರರಿವಿಲ್ಲದೆ
ತಪ್ಪು ಮಾಡುತಿರಬೇಕು
ನಾವು ಸಾಯುವವರೆಗೆ.
ಒದ್ದಾಟ...
ಅವರೇನೋ
ತಾಯಿ ಭಾರತಿಯ
ಪಾದಗಳಲೊಂದಾಗ
ಹೊರಟಿಹೆವೆಂದು
ನಗುನಗುತ್ತಲೇ
ಇದ್ದರಂತೆ...
ಇಂತವರ ಉಸಿರ
ಕಸಿಯಬೇಕೆನುವ
ಒದ್ದಾಟವೆಲ್ಲಾ
ಆ ನೇಣುಗಂಬ
ಮತ್ತು ಕುಣಿಕೆಗೆ..
ಮತ್ತಾ ಕುಣಿಕೆಯೆ
ಬಿಗಿದವನಿಗೆ...
(ಅ)ಸಹಕಾರ
ಅಸಹಕಾರ
ಚಳುವಳಿಯ
ರೂವಾರಿ
"ತಾತ"ನಿಗೇಕೋ
ಭಗತ, ರಾಜಗುರು
ಸುಖದೇವರ
ನೇಣು ಕುಣಿಕೆಯ
ಸಿದ್ಧಗೊಳಿಸುವಾಗ..
ಬಿಳಿಯರಿಗೆ
ಸಹಕರಿಸುವ
ಮನಸಾಯಿತು...
Newer Posts
Older Posts
Home
Subscribe to:
Comments (Atom)