Thursday, 25 August 2011

ಅತ್ತ ಆಗಸದ ನೀಲ ವರ್ಣ, ಇತ್ತ ಭೂರಮೆಯ ಹಸಿರು ವರ್ಣ
ಈ ಬಣ್ಣಗಳ ನಡುವೆಯೇ ನಡೆಯ ತೊಡಗಿದೆಯೇ ಯುದ್ಧ.
ಆಗಸದ ಗೆಲುವಿಗಾಗಿ ಸಾಲು ಕಟ್ಟಿ ಮೋಡಗಳು ಆದವು ಸಿದ್ಧ
ಇಳೆಯ ಗೆಲುವಿಗಾಗಿ ತೊಡೆ ತಟ್ಟಿ ಬಾಳೆ ತೋಟವಾಗಿಹುದು ಸನ್ನದ್ಧ

Monday, 22 August 2011

DEEPASTAMBADA VYATHE

ನಿಮ್ಮೊಳಗಿನ ಆನಂದವನು
ನಾ ಪಡೆಯುವುದಾದರೂ ಹೇಗೆ?
ಬಾನ ಸೂರ್ಯನನು ಹಿಡಿಯುವುದಕಾಗಿ
ಮೇಲೆ ಮೇಲೇರುವ ಚಿಮ್ಮುವ 
ಉತ್ಸಾಹ ನಿಮ್ಮೊಳಗಾದರೆ;
ಮುಳುಗೋ ರವಿಯ ಮುಟ್ಟುವಾಸೆಯಿಂದ
ಕಡಲಿನ ಅಲೆಗಳನೆ ಸೀಳಿ
ಮುನ್ನುಗ್ಗುವ ಚೈತನ್ಯ  ಅವರಲಿ;
ಆ ಬದುಕ ಆಸ್ವಾದಿಸುವಾಸೆ ನನಗೂ ಇದೆ
ಸಿಕ್ಕಲ್ಲಿ ನನಗೂ ಬಾಳ ಸಂಗಾತಿಯ ಜೊತೆ.
ಆದರೀಗ ಯಾರ ಬಳಿ  ಹೇಳಲಿ?
ನಾ ನನ್ನ ಒಂಟಿತನದ ವ್ಯಥೆ.



Tuesday, 9 August 2011

VYATHYASA

ಭಾವವೊಂದನು ಬಿಟ್ಟರೆ
'ಅ'ಕಾರ ಮತ್ತು 'ಇ'ಕಾರದಷ್ಟೇ
ವ್ಯತ್ಯಾಸ ಅಂದಿಗೂ ಇಂದಿಗೂ;
ಅಂದು ಭಕ್ತಿಯಲಿ ತಲ್ಲೀನರಾಗಿ
ಕುಣಿಯುತ ಹಾಡುತಿದ್ದರು
ಭಕ್ತಿ ಗೀತೆ ರಂಗ ರಂಗ
ಇಂದು ನಶೆಯಲಿ "ಫುಲ್"ಲೀನರಾಗಿ 
ಕುಣಿಯುತ ಹಾಡುವರು
ಚಿತ್ರಗೀತೆ ರಿಂಗ ರಿಂಗ.

Wednesday, 3 August 2011

NERALINANTE

ನಿನ್ನ ಮರೆಯಬೇಕು
ಎಂದೆನಿಸಿದರು; ನೆನಪುಗಳು
ಮನದಲೇ ಮನೆಯ
ಮಾಡಿದೆ ವನಿತೆ.
ತೊರೆಯದ ರೀತಿಯಲಿ
ಅಂಟಿಕೊಂಡಿದೆ ಮನಕೆ
ಬಯಲಿನಲ್ಲಿ ನೆರಳುಗಳು
ಭೂಮಿಗೆ ಅಂಟಿಕೊಂಡಂತೆ.