Friday, 9 March 2012

ವ್ಯತ್ಯಾಸ



ಅವಳಿಗೂ
ಅವಳ ನೆನಪಿಗೂ
ಎಷ್ಟೊಂದು
ವ್ಯತ್ಯಾಸ.
ನಾ ಗೋಗರೆದರೂ
ಅವಳೆನ್ನ ಬಳಿ
ಬರಲೇ ಇಲ್ಲ.
ಅವಳ ನೆನಪೋ
ಹೋಗು ಹೋಗೆಂದರೂ
ನನ್ನ ಬಿಟ್ಟು
ಹೋಗುತ್ತಿಲ್ಲ

Thursday, 8 March 2012


ನವಮಾಸ ಹೊತ್ತು ಹೆರುವ ತಾಯಿ,
ಮತ್ತೆ ತನುವ ಹೊರುವ ಭೂತಾಯಿ,
ತಲೆಯ ನೇವರಿಸಿ ಪ್ರೀತಿ ತೋರುವ ಅಕ್ಕ
ರಕ್ಷೆಯ ಕಟ್ಟಿ ತನ್ನ ರಕ್ಷಿಸೆಂದು ಕೇಳುವ ತಂಗಿ,
ಸ್ನೇಹಕ್ಕೆ ಜೊತೆಯಾಗುವ ಗೆಳತಿ
ಸುಖ ದುಃಖವ ಸಮವಾಗಿ ಹಂಚಿಕೊಳ್ಳುವ ಪತ್ನಿ
ಎಲ್ಲ ತಪ್ಪುಗಳನ್ನೂ ಮನ್ನಿಸಿ ಮುದ್ದಿಸುವ ಅಜ್ಜಿ
ಮಾತೃ ಪ್ರೀತಿಯನೀವ ಚಿಕ್ಕಮ್ಮ, ದೊಡ್ಡಮ್ಮ
ಮಮತೆಯ ಸುಧೆಯ ಹರಿಸುವ ಅತ್ತೆ, ಅತ್ತಿಗೆ
ಎಷ್ಟೊಂದು ರೂಪ ಈ ಮಹಿಳೆಗೆ
ಪ್ರೀತಿ, ಸಹನೆ, ಮಮತೆ, ತ್ಯಾಗವೇ
ಭೂಷಣವಂತೆ ಇವಳ ಬಾಳಿಗೆ
ಹೃದಯಪೂರ್ವಕ ನುಡಿ ನಮನವಿದು
ಭುವಿಯ ಮೇಲಿಹ ಹಲವು ರೂಪದ ಹೆಣ್ಣಿಗೆ

Wednesday, 7 March 2012


ಹೆಣ್ಣಾನೆ
ಮತ್ತು
ಯುವರಾಜನ
ನಡುವಿನ
ಕಾಳಗದಲ್ಲಿ
ಇಬ್ಬರಿಗೂ
ಗಾಯವಾಗಿದೆ.
ಗುಣಪಡಿಸಬಲ್ಲ
ಮುಲಾ(ಯ)ಮು
ಇಬ್ಬರ
ಕೈಗೆಟುಕದಷ್ಟು
ಎತ್ತರಕ್ಕೇರಿ
ಗೆಲುವಿನ
ನಗೆಬೀರಿದೆ


ಹರುಷದಿಂದ
ನಮಗೆಲ್ಲಾ
ಆಚರಿಸಲು
ಬಣ್ಣಗಳ ಹಬ್ಬ
ಬರುವುದು
ಒಂದೇ ಬಾರಿ
ವರುಷದಲಿ;
ಆದರೆ ಆ
ನೇಸರ
ಒಬ್ಬಂಟಿಯಾದರೂ
ಕಡಲ ನೀರನ್ನೇ
ಓಕುಳಿಯನ್ನಾಗಿಸಿ
ಬಾನಿಗೆಲ್ಲಾ
ಬಣ್ಣಗಳ ಎರಚುತ್ತಾ
ಹೋಳಿಯ 
ಸಡಗರವನಾಚರಿಸುವನು
ಪ್ರತಿ ದಿನದ
ಮುಂಜಾನೆಯಲಿ
ಮತ್ತು ಮುಸ್ಸಂಜೆಯಲಿ


Tuesday, 6 March 2012

ಕವಿತೆ..


ಕವಿತೆಯೆಂಬುದು
ಹೆಣ್ಣು ..ನಿಜ,
ಮನಸಿನಲೆಲ್ಲೋ
ಹುಟ್ಟಿ ಬೆಳೆದರೂ
ಹಾಳೆಯೆನುವ
ಗಂಡಿನ ಜೊತೆ
ಸೇರಿದಾಗಲೇ
ಅವಳ ಬದುಕು
ಸಾರ್ಥಕ...


ಅವಳ
ಪ್ರತಿಯೊಂದು
ನೆನಪುಗಳ
ಹೊರಗೋಡಿಸಿಬಿಟ್ಟಿದ್ದೆ;
ನಿರಾಳವಾಗಿ
ನಿದಿರೆಗಾಗಿ
ಕಣ್ಣಿನ ಕದವ
ಮುಚ್ಚಿಬಿಟ್ಟಿದ್ದೆ,
ಆದರೆ...
ನಿದಿರಾ ದೇವಿಯು
ತಾನೊಬ್ಬಳೇ
ಬರದೆ
ತನ್ನೊಡನೆ
ಅವಳ
ಕನಸುಗಳನ್ನೂ
ಕರೆತಂದಿದ್ದಾದರೂ
ಯಾಕೆ...??

Thursday, 1 March 2012

ಪ್ರೇಮಾಗ್ನಿ

ನನ್ನೊಳಗೆ

ಪ್ರೀತಿಯೆನುವ

ಬೆಂಕಿಯೊಂದು

ಹುಟ್ಟಿಕೊಂಡಿದ್ದು

ಅವಳಿಂದ;


ನನ್ನ ಸುಡದೆಯೇ



ಈ ಬೆಂಕಿ

ಆರಿ ಹೋದದ್ದು


ಅವಳೆನಗೆ ಕೊಟ್ಟ


ಕಣ್ಣೀರಿಂದ.