ನವಮಾಸ ಹೊತ್ತು ಹೆರುವ ತಾಯಿ,
ಮತ್ತೆ ತನುವ ಹೊರುವ ಭೂತಾಯಿ,
ತಲೆಯ ನೇವರಿಸಿ ಪ್ರೀತಿ ತೋರುವ ಅಕ್ಕ
ರಕ್ಷೆಯ ಕಟ್ಟಿ ತನ್ನ ರಕ್ಷಿಸೆಂದು ಕೇಳುವ ತಂಗಿ,
ಸ್ನೇಹಕ್ಕೆ ಜೊತೆಯಾಗುವ ಗೆಳತಿ
ಸುಖ ದುಃಖವ ಸಮವಾಗಿ ಹಂಚಿಕೊಳ್ಳುವ ಪತ್ನಿ
ಎಲ್ಲ ತಪ್ಪುಗಳನ್ನೂ ಮನ್ನಿಸಿ ಮುದ್ದಿಸುವ ಅಜ್ಜಿ
ಮಾತೃ ಪ್ರೀತಿಯನೀವ ಚಿಕ್ಕಮ್ಮ, ದೊಡ್ಡಮ್ಮ
ಮಮತೆಯ ಸುಧೆಯ ಹರಿಸುವ ಅತ್ತೆ, ಅತ್ತಿಗೆ
ಎಷ್ಟೊಂದು ರೂಪ ಈ ಮಹಿಳೆಗೆ
ಪ್ರೀತಿ, ಸಹನೆ, ಮಮತೆ, ತ್ಯಾಗವೇ
ಭೂಷಣವಂತೆ ಇವಳ ಬಾಳಿಗೆ
ಹೃದಯಪೂರ್ವಕ ನುಡಿ ನಮನವಿದು
ಭುವಿಯ ಮೇಲಿಹ ಹಲವು ರೂಪದ ಹೆಣ್ಣಿಗೆ
No comments:
Post a Comment