Tuesday, 13 March, 2012

ಭುವಿಯ ಮೇಲಿನ
ಮಂಜಿನಾ
ಚಾಪೆಯನು ಮಡಚಿ
ತರುಲತೆಗಳಿಗೆಲ್ಲ
ಇಬ್ಬನಿಯ ನೀರನುಣಿಸಿ
ತನ್ನ ಬೆಳಕಿನಾ
ಕಿರಣಗಳ ಪೊರಕೆಯಿಂದ
ಆಗಸದ ಕತ್ತಲ
ಕಸವನು ಗುಡಿಸಿ
ಹೊರಟನು ನೇಸರ
ಪಡುವಣದೂರಿಗೆ
ಮುಂಜಾನೆಯ ತನ್ನ
ಕೆಲಸವನೆಲ್ಲ ಮುಗಿಸಿNo comments:

Post a Comment