Tuesday, 20 March 2012

ಶುಭ ಶಕುನ



ಶುಭ ಶಕುನಗಳಾಗುತಿದೆ
ಒಂದೊಂದಾಗಿ ಶುಭಶಕುನಗಳಾಗುತಿದೆ,
ಕತ್ತಲ ಕಪ್ಪು ಬಣ್ಣವ ಸರಿಸುವ ಸಲುವಾಗಿ
ಮುಡಣದಿ ಬಣ್ಣಗಳು ಗೋಚರಿಸತೊಡಗಿದೆ,
ರವಿಯಾಗಮನವ ದೂರದಲಿ ಕಂಡು
ಹಕ್ಕಿಗಳು ಸಂತಸದಿ ಹಾಡತೊಡಗಿದೆ,
ಇರುಳಿನಲಿ ಭುವಿಗೆ ಕಾವಲಾಗಿದ್ದ
ಮಂಜು ಮೆಲ್ಲಗೆ ಕರಗತೊಡಗಿದೆ,
ನಡುರಾತ್ರಿಯಿಂದಲೇ ಗಿಡಮರದೆಲೆಗಳ ಮೇಲೆ
ಕಾಯುತ್ತ ಕುಳಿತಿದ್ದ ಇಬ್ಬನಿಯು ಮುತ್ತಾಗತೊಡಗಿದೆ,
ನಿಶ್ಚಲತೆಗೆ ದಾಸರಾಗಿದ್ದ ಜನರಿಗೆಲ್ಲಾ
ಬಿಡುಗಡೆಯ ಸಂಭ್ರಮವು ಸಿಗುತಿದೆ,
ಕತ್ತಲಿನ ದುರಾಡಳಿತವು ಕೊನೆಗೊಂಡಿದೆ,
ಮುಡಣದ ತುದಿಯಿಂದ, ಆಗಸದ ರಾಜಬೀದಿಯಲಿ
ಜಗದ ಶಕ್ತಿಯೊಡೆಯ ನೇಸರನ
ಮಂದ ನಡಿಗೆಯು ಪ್ರಾರಂಭವಾಗಿದೆ.
ಮತ್ತೆ ಜಗಕೆಲ್ಲಾ ಬೆಳಕಾಗಿದೆ.


2 comments:

  1. ಮನೆ-ಮನ ಬದುಕಲ್ಲಿ ಬೆಳಕು ಮೂಡಲಿ, ಶುಭಶಕುನವಾಗಲಿ..
    ಉಗಾದಿಯ ಶುಭಾಶಯಗಳು....
    -ಸುಷ್ಮಾ ಮೂಡುಬಿದರೆ..

    ReplyDelete
  2. ಧನ್ಯವಾದಗಳು ಸುಷ್ಮಾರವರೆ

    ReplyDelete