ಅಪರಿಚಿತೆಯಾದರೂ
ತನ್ನ ಅಂಗೈಯಲ್ಲಿದ್ದ
ಬಣ್ಣಗಳನೆಲ್ಲಾ
ನನ್ನ ಕೆನ್ನೆಗೆ ಸವರಿದ
ಆಕೆ ಆಗ ತಾನೇ
ಹೇಳಿದ್ದಳು
ಹ್ಯಾಪಿ ಹೋಳಿ,
.
.
.
,
.
,
ಹಾಳಾದ
ಬಸ್ ಕಂಡಕ್ಟರ್
ಅದೇ ಸಮಯಕ್ಕೆ
ಹೇಳೋದಾ
" ಸ್ವಾಮಿ ನಿಮ್ಮ
ಸ್ಟಾಪ್ ಬಂತು ಏಳಿ
ಹರುಷದಿಂದ
ನಮಗೆಲ್ಲಾ
ಆಚರಿಸಲು
ಬಣ್ಣಗಳ ಹಬ್ಬ
ಬರುವುದು
ಒಂದೇ ಬಾರಿ
ವರುಷದಲಿ;
ಆದರೆ ಆ
ನೇಸರ
ಒಬ್ಬಂಟಿಯಾದರೂ
ಕಡಲ ನೀರನ್ನೇ
ಓಕುಳಿಯನ್ನಾಗಿಸಿ
ಬಾನಿಗೆಲ್ಲಾ
ಬಣ್ಣಗಳ ಎರಚುತ್ತಾ
ಹೋಳಿಯ
ಸಡಗರವನಾಚರಿಸುವನು
ಪ್ರತಿ ದಿನದ
ಮುಂಜಾನೆಯಲಿ
ಮತ್ತು ಮುಸ್ಸಂಜೆಯಲಿ
ಬದುಕೇ ಹೀಗೆ....
ಇಲ್ಲಿ ಉಳುಮೆಯ ಕೆಲಸ
ಆಗಲೇ ಬೇಕು...
ಕರ್ಮದ ಬಿತ್ತನೆಗೆ
ಫಲ ಇದ್ದೇ ಇದೆ..
ಅದಾವುದ ಬೆಳೆಯುವೆವೋ
ಸಿಗುವುದದರದ್ದೇ ಫಲ...
ಭಗವಂತನ ಕೃಪಾದೃಷ್ಟಿಯ
ಮಳೆಯ ಬಗೆಗೆ ಸಂದೇಹವಿಲ್ಲ,
ತೊಂದರೆಯೆಂದರೆ ಬರಿಯ
ಪೂರ್ವ ಸುಕೃತದ
ಕೀಟಗಳದು ಅಥವಾ ಪಶುಪಕ್ಷಿಗಳದು
ಬೆಳೆಯ ತಿಂದೀತೋ... ?
ಅಥವಾ ಕಳೆಯ ತಿಂದು
ಬೆಳೆಯ ಬೆಳೆಸೀತೋ....?
ಎನ್ನುವುದರರಿವು ಯಾರಿಗೂ ಇಲ್ಲ.
ಕಾಯಬೇಕು....
ಫಲ ಸಿಗುವ ಮುನ್ನವೇ
ಉಸಿರು ನಿಂತರೂ
ಕಳವಳ ಪಡಬೇಕಾಗಿಲ್ಲ...
ಮತ್ತವು ಬರುವುದು
ಮುಂದಿನ ಜೀವನದುಳುಮೆಯ
ಬೆಳೆಗಳ ಹಾಳುಗೆಡವಲೋ...
ಅಥವಾ ಉಳಿಸಿ ಬೆಳೆಸಲೋ...?
ಬರಿಯ ಸಿಹಿ ತಿಂಡಿಯಿಂದಾಗಿ ಬರುವ ಹುಳಗಳಿಂದ ಮಾತ್ರ ಹಲ್ಲುನೋವು ಬರುವುದೆಂಬ ಭ್ರಮೆಯಲಿದ್ದೆ.. . . . . ನನ್ನವಳು ಮಾಡಿದ ಚಕ್ಕುಲಿಯ ತಿಂದಾಗಿನಿಂದ ಆ ಭ್ರಮೆಯಿಂದ ಹೊರಬರುತ್ತಿದ್ದೇನೆ...