ಉಡುಪಿ ಮಂಗಳೂರಿನ ಹೊಸ ರೋಡಿನ ಕಾಮಗಾರಿಯಿಂದಾಗಿ ಸಿಗುವುದು ನಮಗೆ ಅಲ್ಲಲ್ಲಿ ಕೆಲವು ಡೈವರ್ಶನ್ನು(Diversion) ಆದರೆ ಅಲ್ಲಾದ ಸಾವುಗಳ ಪಟ್ಟಿ ನೋಡಿದಾಗ ನನಗನಿಸುವುದು ಇದು ಅಪಘಾತಕ್ಕಾಗೇ ಮಾಡಿದ ಹೊಸ ಡೈ(Die)ವರ್ಶನ್ನು(Version)
ಜೀವನವೂ ಫೇಸ್ ಬುಕ್ ತರ ಎಂದುಕೊಂಡು ಬಸ್ ಸ್ಟ್ಯಾಂಡಿನಲಿ ಒಂಟಿಯಾಗಿದ್ದ ಹುಡುಗಿಯ ನಗು ಮೊಗದ ಕಡೆ ತೇಲಿ ಬಿಟ್ಟೆ " ಹಾಯ್ " ಎನುವ ಸಣ್ಣ ಕಮೆಂಟು; ಅಲ್ಲಿಂದಲೊಂದು " ಹಾಯ್ "ನ ನಿರೀಕ್ಷೆಯಲಿದ್ದ ನನಗೆ ಸಿಕ್ಕಿದ್ದು " ಬೇಕಾ " ಎನುವ ಹೊಸ ಕಮೆಂಟು, ಮತ್ತೆ ಥಂಬ್ಸ್ ಅಪ್ ಸಿಂಬಲಿಗೆ ಬದಲಾಗಿ ಕಾಣಿಸಿತು ಅವಳ ಕಾಲಿನ ಒಂದು ಮೆಟ್ಟು