Tuesday, 12 April 2011
NANNAVALA NAGU
ಸಮಯವೂ ನಿಂತೀತು , ನಿನ್ನ ನಗುವಿನ
ರೀತಿಯನು ಕಂಡು, ಮತಿಯ ಕಳೆದುಕೊಂಡು
ತರುಲತೆಗಳು ಆನಂದದಿಂದ ಪ್ರಾರಂಭಿಸಿದವು
ನಾಟ್ಯಗೈಯಲು ನಿನ್ನ ನಗುವಿನ ಧಾಟಿಯನು ಕಂಡು.
ನಿನ್ನ ನಗುವು ಸಂಗೀತದ ಸ್ವರದಂತೆ, ಅದು
ನಗೆಯ ನಾಯಕಿಗೆ ನಾಚಿಕೆಯ ತರುತಿದೆ
ಗಾಳಿಯು ಅಲೆ ಅಲೆಯಾಗಿ ಬೀಸುತಲಿ
ಗೀತೆಯಾಗಿ ನಿನ್ನ ನಗೆಯ ಪರಿವರ್ತಿಸುತಿದೆ.
ಬದುಕು ವ್ಯರ್ಥವಾಯಿತೆಂದು ನೆನೆಯುತ
ದುಃಖಿಸುತ ಚಂದ್ರನೆನುವನು, ನನಗೇಕೆ ಈ ನಗುವಿನ ಕಲೆ ತಿಳಿದಿಲ್ಲ
ಕಿಲಕಿಲನೆ ನಗುತ, ಮುಗುಳುನಗೆಯನೆ ಬೀರುತ ಈ
ಹೆಣ್ಣು ನನ್ನ ಸೌಂದರ್ಯವನೆ ಕಡಿಮೆಗೊಳಿಸುತಿರುವಳಲ್ಲ.
Monday, 4 April 2011
SAMARA
ಮುಂಜಾನೆ ಮುಡಣದ ಕಡಲ ಒಡಲಲಿ
ನಿಂತು ಬಾನ ದಿಟ್ಟಿಸುವನು ದಿನಕರ
ಉಗ್ರ ರೂಪವ ತಾಳಿ ಕೆಂಪು ಕೆಂಪಾಗುತಲಿ
ಬಾನೆಡೆಗೆ ಬಿಡುವನು ರಜತ ಕಿರಣವೆಂಬ ಶರ
ಮೆಲ್ಲ ಮೆಲ್ಲನೆ ಹೊತ್ತು ಕಳೆಯುತಿರಲು
ಕಡಲ ತೊರೆದು ದಿಬ್ಬವನೇರಿ ಬಿಡುವನು ಬಾಣ
ಆ ಬಾಣದ ಏಟು ತಿಂದು ಇರುಳು ಘಾಸಿಗೊಳಲು
ಬೆಳಕೆಂಬ ರಕ್ತವ ಚೆಲ್ಲಿ ಓಡುವುದು ಉಳಿಸಲು ತನ್ನ ಪ್ರಾಣ
ಜಯ ತನ್ನದಾದ ಸಂತಸದಿ ಮುಗಿಲೆಡೆಗೆ ಹಾರಿ
ವ್ಯಕ್ತ ಪಡಿಸಿದ ತನ್ನ ಆನಂದವನು ಆ ಭಾಸ್ಕರ
ಚಿಲಿ ಪಿಳಿ ಯೆನ್ದುಲಿಯುತ ಹಕ್ಕಿಗಳು ಶುಭ ಕೋರಿ
ಹೊಗಳಿದವು ಆತನ " ನೀನೆ ಏಕೈಕ ವೀರ, ಶೂರ"
ವಿಜಯದ ಸಂತಸವು, ಹೊಗಳಿಕೆಯ ನುಡಿಗಳು ಕೂಡಿ
ಒಂದಾಗಲು ಬೀಗತೊಡಗಿದ ತನ್ನ ಬಗೆಗೆ ಆ ಆದಿತ್ಯ
ಪ್ರತಿಫಾಲದೊಪಾದಿಯಲಿ ಭುವಿಯೆಡೆಗೆ ತೀಕ್ಷ್ಣ ದೃಷ್ಟಿಯಲಿ ನೋಡಿ
ಅಧಿಕಗೊಳಿಸಿದ ಬಿಸಿಲ ಧಗೆಯ, ಹೇಳುತಲಿ ನೋಡಿದಿರಾ ನನ್ನ ಸಾಮರ್ಥ್ಯ
ಈ ರೀತಿ ಕುಣಿ ಕುಣಿದು ಪಡುವಣವ ಸೇರಲು
ತಿಳಿಯದಾಯಿತು ರವಿಗೆ ತನಗಿನ್ನು ಬರುವುದು ಸೋಲಿನ ಸಮಯ
ಮೆಲ್ಲನೆ ಬಂದ ಕಾರಿರುಳು ನುಡಿಯಿತು, " ನಿಲ್ಲು ನೀ ಯುದ್ಧವ ಮಾಡಲು"
ಊಹಿಸಲಾಗದ ಘಟನೆಯ ಕಂಡು ರವಿಗಾಯಿತು ಭಯ
ಭಯದಿ ಎದುರಿಸಲಾಗದೆ ಹೋದ ರವಿ, ಕತ್ತಲ ಬಾಣದ ಹೊಡೆತ
ಅದರಿಂದಾಗಿಯೇ ರಕ್ತವು ಸುರಿದು ಕೆಂಪು ಕೆಂಪಾಯಿತವನ ಶರೀರ
ನಿಲ್ಲಲಾಗದೆ ಅಲ್ಲಿ ಆದಿತ್ಯ ಕಡಲಬ್ಬೆಯ ಗರ್ಭವನ್ನು ಸೇರುತ
ನುಡಿದ, " ಎಲೆ ಇರುಳೆ ನಗದಿರು, ನಾಳೆ ಮುಂಜಾನೆ ಖಚಿತ ನಿನ್ನ ಸಂಹಾರ"
Subscribe to:
Posts (Atom)