ನನ್ನವಳು ನೆನಪಾಗುವಳು
ಕಾರ್ಮುಗಿಲು ಬಾನನಾವರಿಸಿ
ಮಳೆಯ ಸುರಿಸದೆಯೇ
ಗಾಳಿಯೊಂದಿಗೆ ಮರೆಯಾದಾಗ
ನನ್ನವಳು ನೆನಪಾಗುವಳು
ಅರಳದ ಹೂವೊಂದು
ಮೊಗ್ಗಿನಲೇ ಗಿಡದ
ಸಂಗವನು ತೊರೆದಾಗ
ನನ್ನವಳು ನೆನಪಾಗುವಳು
ಪ್ರತಿ ಸಂಜೆಯ ಏಕಾಂತದಲಿ
ಪ್ರತಿ ರಾತ್ರಿಯ ಮೌನದಲಿ
ಕನಸುಗಳು ಮುಡುವಾಗ
ವಾಸ್ತವದಿ ನನ್ನವಳು ನೆನಪಾಗದವಳು
ನೆನಪಾಗುವುದಾದರೂ ಹೇಗೆ?
ಅವಳನೊಂದು ಕ್ಷಣವೂ
ನಾ ಮರೆಯದಿರುವಾಗ.
No comments:
Post a Comment