Monday, 4 April 2011

SAMARA

ಮುಂಜಾನೆ  ಮುಡಣದ ಕಡಲ ಒಡಲಲಿ 
ನಿಂತು ಬಾನ ದಿಟ್ಟಿಸುವನು ದಿನಕರ
ಉಗ್ರ ರೂಪವ ತಾಳಿ ಕೆಂಪು ಕೆಂಪಾಗುತಲಿ
ಬಾನೆಡೆಗೆ ಬಿಡುವನು ರಜತ ಕಿರಣವೆಂಬ ಶರ 

ಮೆಲ್ಲ ಮೆಲ್ಲನೆ ಹೊತ್ತು ಕಳೆಯುತಿರಲು
ಕಡಲ ತೊರೆದು ದಿಬ್ಬವನೇರಿ ಬಿಡುವನು ಬಾಣ
ಆ ಬಾಣದ ಏಟು  ತಿಂದು ಇರುಳು ಘಾಸಿಗೊಳಲು
ಬೆಳಕೆಂಬ ರಕ್ತವ ಚೆಲ್ಲಿ ಓಡುವುದು ಉಳಿಸಲು ತನ್ನ ಪ್ರಾಣ

ಜಯ ತನ್ನದಾದ ಸಂತಸದಿ ಮುಗಿಲೆಡೆಗೆ ಹಾರಿ
ವ್ಯಕ್ತ ಪಡಿಸಿದ ತನ್ನ ಆನಂದವನು ಆ ಭಾಸ್ಕರ
ಚಿಲಿ ಪಿಳಿ ಯೆನ್ದುಲಿಯುತ ಹಕ್ಕಿಗಳು ಶುಭ ಕೋರಿ
ಹೊಗಳಿದವು ಆತನ " ನೀನೆ ಏಕೈಕ ವೀರ, ಶೂರ"

ವಿಜಯದ ಸಂತಸವು, ಹೊಗಳಿಕೆಯ ನುಡಿಗಳು ಕೂಡಿ
ಒಂದಾಗಲು ಬೀಗತೊಡಗಿದ ತನ್ನ ಬಗೆಗೆ ಆ ಆದಿತ್ಯ
ಪ್ರತಿಫಾಲದೊಪಾದಿಯಲಿ ಭುವಿಯೆಡೆಗೆ ತೀಕ್ಷ್ಣ ದೃಷ್ಟಿಯಲಿ ನೋಡಿ
ಅಧಿಕಗೊಳಿಸಿದ ಬಿಸಿಲ ಧಗೆಯ, ಹೇಳುತಲಿ ನೋಡಿದಿರಾ ನನ್ನ ಸಾಮರ್ಥ್ಯ

ಈ ರೀತಿ ಕುಣಿ ಕುಣಿದು ಪಡುವಣವ ಸೇರಲು
ತಿಳಿಯದಾಯಿತು ರವಿಗೆ ತನಗಿನ್ನು ಬರುವುದು ಸೋಲಿನ ಸಮಯ
ಮೆಲ್ಲನೆ ಬಂದ ಕಾರಿರುಳು ನುಡಿಯಿತು, " ನಿಲ್ಲು ನೀ ಯುದ್ಧವ ಮಾಡಲು"
ಊಹಿಸಲಾಗದ ಘಟನೆಯ ಕಂಡು ರವಿಗಾಯಿತು ಭಯ

ಭಯದಿ ಎದುರಿಸಲಾಗದೆ ಹೋದ ರವಿ, ಕತ್ತಲ ಬಾಣದ ಹೊಡೆತ
ಅದರಿಂದಾಗಿಯೇ ರಕ್ತವು ಸುರಿದು ಕೆಂಪು ಕೆಂಪಾಯಿತವನ ಶರೀರ
ನಿಲ್ಲಲಾಗದೆ ಅಲ್ಲಿ ಆದಿತ್ಯ ಕಡಲಬ್ಬೆಯ ಗರ್ಭವನ್ನು ಸೇರುತ
ನುಡಿದ, " ಎಲೆ ಇರುಳೆ ನಗದಿರು, ನಾಳೆ ಮುಂಜಾನೆ ಖಚಿತ ನಿನ್ನ ಸಂಹಾರ" 



   


No comments:

Post a Comment