Friday 27 May, 2011

VISHA GHALIGE

ಮರೆಯಲು ಉಂಟೆ ಆ ವಿಷ ಗಳಿಗೆ
ನನ್ನ ನಲ್ಲೆ , ನನ್ನೇ ಒಲ್ಲೆ ಎಂದ ಗಳಿಗೆ

ನುಡಿದ ತಕ್ಷಣ ಧುಮುಕಲಿಲ್ಲ , ನನ್ನ ದುಗುಡದಾಶ್ರುಗಳು
ಕಾದು ಕುಳಿತಿತ್ತು ಅದು ಏಕಾಂತದ ಗಾಢ ಕತ್ತಲಿಗೆ.

ಕಣ್ಣಿನಲ್ಲೆಲ್ಲೋ  ಅವಿತಿದ್ದ , ಹರಿದು ಹಂಚಿ ಹೋಗಿದ್ದ ಕಣ್ಣೀರ ಹನಿಗಳು
ಮನಸ  ಮಾತು ಕೇಳದೆ ಮಾಡತೊಡಗಿತು ಕೆನ್ನೆ ಮೇಲೆ ಮೆರವಣಿಗೆ

ಬದ್ಧ ವೈರಿ "ಮೌನ" ದ ಮನೆಯೊಳಗೇ ವಾಸ ಮಾಡತೊಡಗಿತು ನನ್ನ  ಮಾತುಗಳು
ಚಿರ ನಿದ್ರೆಯೇ ಬಂದಿತ್ತು , ಕ್ಷಣ ಕಾಲವೂ ವಿರಮಿಸದ ನನ್ನ ನಾಲಿಗೆಗೆ

ಉತ್ಸಾಹ , ಉಲ್ಲಾಸ ಗಳು ಪರಿಚಿತರಾಗಿದ್ದರು, ಈಗ ನನಗೆ ಅಪರಿಚಿತರು
ಮನದಾಳದ ಪೂರ್ಣ ಕುಂಭ ಸ್ವಾಗತವೀಗ ಬರಿಯ ದುಗುಡ, ಬೇಸರವೆನುವ ಆಗಂತುಕರಿಗೆ.

ನಲಿದಾಡಿದರು ದಣಿವರಿಯದ ಜೀವಕೆ, ದಣಿವ ತರುತಿಹುದು ಇಡುವ ಪ್ರತಿ ಹೆಜ್ಜೆಗಳು
ಸಂತಸದ ವೃಂದಾವನವದು ಸುಟ್ಟು  ಕರಕಲಾಗಿಹುದು, ವಿರಹದಾ ಸಣ್ಣ ಕಾಳ್ಗಿಚ್ಚಿಗೆ




No comments:

Post a Comment