Monday, 9 February 2015

ಒಂಟಿತನ



ಪದಗಳು ಕವನದಾ
ಹಿಡಿತಕ್ಕೆ ಸಿಗದಾದಾಗ
ಅದೇನೋ ವಿಚಿತ್ರವಾದ
ಒಂಟಿತನದ ಭಾವ
ನನ್ನನೀಗೀಗ ಕಾಡುತ್ತದೆ.
ಮೊದಲೆಲ್ಲಾ ಹೀಗಿರಲಿಲ್ಲ
ಪದಗಳಿಗೂ ನನಗೂ
ತೀರಾ ಪರಿಚಯದ ನಂಟು
ಅಂತೇನೂ ಇದ್ದಿರಲಿಲ್ಲ.
ಅದು ತೀರಾ ಆಕಸ್ಮಿಕದ ಭೇಟಿ,
ನಾವಿಬ್ಬರೂ ಕವನ ಕಟ್ಟೆಯಲಿ
ಜೊತೆ ಜೊತೆಗಿರಲು
ನೋಡುಗರ ಮೆಚ್ಚುಗೆಯ
ಮಾತುಗಳೇ ಅವುಗಳ
ಸನಿಹವ ಮತ್ತೆ ಮತ್ತೆ
ಬಯಸುವಂತೆ ಮಾಡಿದ್ದು.
ಅಂದು ಆ ಮೆಚ್ಚುಗೆಯ
ಮಾತುಗಳಿಗೆಲ್ಲಾ
ಕಿವಿಗೊಡಬಾರದಿತ್ತೇನೋ...?
ಹೀಗೆ ಒಂಟಿತನದ
ನೋವ ನುಂಗುವುದು
ನನಗಾಗ ದಕ್ಕುತ್ತಿರಲಿಲ್ಲವೇನೋ...?
ಹಾಗಿರುತ್ತಿತೋ ಏನೋ...?
ಹೀಗಿರುತಿತ್ತೋ ಏನೋ...?
ಎಂದು ಈಗ ಯೋಚಿಸಿ ಫಲವೇನು...?
ಗೀಚುವ ಗೀಳಿನ
ನೀರಿನೊಳಗಿಳಿದಾಗಿದೆ
ಆಗಾಗಾ ಒಂಟಿತನದ
ಚಳಿಯ ಸಹಿಸುವುದು
ಅನಿವಾರ್ಯವಾಗಿದೆ.

1 comment:

  1. ನಿಮಗಾದರೂ ಒಂಟಿತನ ಕವಿವರ್ಯ, ನನಗೆ ಪದಗಳೇ ಸಿಗದೆ ಕವನವು ಕೈಗೆಟುಕದೆ ವಿರಹ ಬಾಧೆ! :-(

    ReplyDelete