ಓ ಮನಸೇ ನೋವೇತಕೆ ನಿನ್ನ ತನುವಿಗೆ?
ಓ ಕನಸೇ ಸಾವೇತಕೆ ನಿನ್ನ ಬಾಳಿಗೆ?
ಸಿಗದೇ ಹೋದರೆ ನನಗೆ, ನನ್ನವಳ ಮುಗುಳು ನಗೆ.
ಅವಳ ನೋಟ ನನ್ನೆಡೆಗಿಲ್ಲದಿರೆ , ಬೆವರೇತಕೆ ? ನಯನವೇ ನಿನ್ನ ದೇಹಕೆ.
ಅವಳ ನುಡಿ ನನಗಾಗಿ ಬಾರದಿರೆ, ಆಹಾರವಿಲ್ಲವೇತಕೆ? ಕಿವಿಯೇ ನಿನ್ನುದರಕೆ;
ಅವಳ ತನುವಿನ ಗಂಧವಿಲ್ಲದ ಗಾಳಿ ಬಳಿ ಬಂದರೆ, ಹಸಿವಿಲ್ಲವೇತಕೆ? ಈ ನಾಸಿಕಕೆ;
ನಿಶ್ಚಲತೆ ಏತಕೆ? ನನ್ನ ಕಾಲಿಗೆ, ಅವಳೆನಗೆ ಕಾಣುವಂತಿದ್ದರೆ;
ಅವಳ ಕನಸು ಮೊಳೆಯುವುದೇತಕೆ ಮನಸಿನೊಳಗೆ, ಅವಳೆನಗೆ ಕಾಣದಂತಿದ್ದರೆ;
ಪ್ರೀತಿಸುವಳೆಂಬ ಭ್ರಮೆಯೇತಕೆ? ಮನಸೇ ನಿನಗೆ, ನಗು ಮುಖದಿ ಅವಳೆನ್ನ ಕಂಡರೆ.
ಪ್ರೀತಿಯ ಹೊತ್ತೊಯ್ಯುತ್ತಿದ್ದರು ನನ್ನ ನೋಟ , ಕಾಣದೇತಕೆ ಅದು ಅವಳ ಕಣ್ಣಿಗೆ,
ನನ್ನ ಈ ಪ್ರೀತಿಗೆ ಪ್ರತಿಫಲವಾಗಿ ಪ್ರೀತಿ ಸಿಗದೇನೋ ಅವಳಿಂದ ನನಗೆ
ಹಾಗಿದ್ದರೆ ಬೇಗದಲಿ ಬಾರದೇತಕೋ, ಸಾವೆನ್ನ ಬಳಿಗೆ, ಅವಳಿರದ ಬಾಳಿಗೆ.






