maunada mathu
Thursday, 6 March 2014
ಅವಳಂತೆ...
ಪದಗಳೂ
ಅವಳಂತೆ
ವರ್ತಿಸುತಿದೆ,
ನನ್ನ
ಕಂಡೊಡನೆ
ದೂರ
ಸರಿಯುತಿದೆ.
ಹುತಾತ್ಮ...
ಗುಂಡನೆದೆಯಲಿ ನುಂಗಿ
ಹುತಾತ್ಮ ಪಟ್ಟವ
ಹೊತ್ತು ಬೀಗುತ್ತಾ
ಮೃತ್ಯು ಲೋಕವ
ಸೇರಿದ ಬಾಪೂವಿಗೆ
ಶಹೀದ್ ಭಗತರನು
ಕಣ್ಣಲ್ಲಿ ಕಣ್ಣಿಟ್ಟು
ನೋಡಲಾಗಲೇ
ಇಲ್ಲವಂತೆ...
ಗಾಂಧಿ ಮತ್ತು ಗೋಡ್ಸೆ...
ಅಸಮಾನತೆಗಳ ಆತ್ಮಕ್ಕೆ
ಅಹಿಂಸೆಯ ಚರ್ಮ
ತೊಟ್ಟಿದ್ದವರಿಗೆ,
ಗುಂಡಿಟ್ಟ ಯುವಕನ
ಹೃದಯದಲಿದ್ದುದು
ಒಂದೇ ಆಸೆಯಂತೆ;
ಅದು ತಾಯಿ ಭಾರತಿಯ
ಪೂಜಕರಿಗೆ...
ನೆಮ್ಮದಿಯ ತಾಯ್ನೆಲವ
ಉಳಿಸಿಕೊಡುವುದಂತೆ.
ಲೈಕು....
ನನ್ನ ಕವನದ
ಪ್ರತೀ ಪದಗಳ
ಉತ್ಕಟ ಆಸೆ,
ಅವಳ ಕೈಯ
ಲೈಕಿನ ಸ್ಪರ್ಶ
ಜಾತಿ
ಜಾತಿ ವೈಷಮ್ಯವ
ತೊಡೆದು ಹಾಕಿ
ಎಂದದ್ಭುತ ಕವನ
ಬರೆದ ಕವಿಯೂ
ಕೂಡ....
ಕೊನೆಯಲ್ಲಿ ತನ್ನ ತಾ
ಗುರುತಿಸಿಕೊಂಡಿದ್ದು
ದಲಿತ ಕವಿಯೆಂದು.
Saturday, 25 January 2014
ಹವ್ಯಾಸ...
ನನ್ನ ಮನದರಮನೆಗೆ
ಆಗಾಗ ಬರುವ
ನನ್ನವಳ ನೆನಪಿಗೆ..
ನನ್ನ ಕಣ್ಣ
ಪಂಜರದಲಿನ
ಕಣ್ಣೀರ ಖಗಗಳನು,
ಬಂಧನದಿಂದ
ಮುಕ್ತಗೊಳಿಸುವುದೇ...
ಬಲು ಮೆಚ್ಚಿನ
ಹವ್ಯಾಸ....
ರಾಜಾಜ್ಞೆ...
ಪ್ರಿಯೆ, ನನ್ನ ಹೃದಯದ
ರಾಜ ಸಿಂಹಾಸನದಲಿ
ನೀನೇ ಕುಳಿತಿರುವೆ...
ಎಂದು ಅವಳ ಬಳಿ
ಹೇಳಲೇಬಾರದಿತ್ತು..
ಈಗ ಮಾತು ಮಾತಿಗೂ
ಇದು ರಾಜಾಜ್ಞೆ...
ಪಾಲಿಸಲೇಬೇಕು
ಅನ್ನುತ್ತಿದ್ದಾಳೆ.
Newer Posts
Older Posts
Home
Subscribe to:
Comments (Atom)