Monday, 28 February 2011

AAGALILLA

ಬಿಡದೆ 
ಮಾಡಿದೆ 
ಹಲವಾರು
 ಯತ್ನವ 
ಆದರು 
ಆಗಲಿಲ್ಲ 
ನಾ, ನನ್ನ
 ಚೆಲುವೆಯ
 ಚೆಲುವ 

KAVITHE

ಮನಸೆಂಬ ಆಗಸದಲಿ
ಓಡಾಡುವ ಕಲ್ಪನೆಯೆಂಬ
ಕರಿದಾದ ದತ್ತ ಮೋಡದಿಂದ
ಕಾಗದವೆಂಬ ಭುವಿಗೆ
ಬಿದ್ದ ಪದಗಳೆಂಬ ಮಳೆ
ಹನಿಗಳಿಂದಾದ ಸುಂದರ ಕೊಳ.

VIRAHA

ಪ್ರಿಯೆ, ದಿನ ದಿನವು ಈಗೆನ್ನ 
ಸ್ಮರಣ ಶಕ್ತಿಗೆ ಹೆರಿಗೆ
ಜನುಮ ಕೊಡುವುದದು
ನಿನ್ನ ನೆನಪೆಂಬ ಕೂಸಿಗೆ
ರೋಮಾಂಚನದ ಅನುಭವ
ಆ ಕ್ಷಣ ಈ ಮೈಯೊಳಗೆ
ನಡುವೆಯೊಂದು ವಿರಹ ವೇದನೆ
ಬದಲಾಗಿ ಪ್ರಸವ ವೇದನೆಗೆ.


KATTALU

ಕವಿ ಓರ್ವ ನುಡಿದಿದ್ದನು
ಚಂದ್ರಮನು ಅಮಾವಾಸ್ಯೆಯಂದು
ತೊಟ್ಟುಕೊಳ್ಳುವ ಬಟ್ಟೆಯೇ ಕತ್ತಲು
ಹಾಗಾದರೆ ಅದೇ ಚಂದ್ರಮನು
ಹುಣ್ಣಿಮೆಯ ದಿನದಂದು 
ಬಟ್ಟೆಯ ಕಳಚಿ ಆಗುವನೇ ಬೆತ್ತಲು?



Saturday, 26 February 2011

BAA BELAKE

ಬಾ ಬೆಳಕೆ ಧರೆಗೆ,
ಜಗದಿ ಹರಡಿಹ ಕತ್ತಲೆಯ ಸಂಹರಿಸಲು ಬಾ
ಸತ್ತಂತೆ ಮಲಗಿಹ ಜನರ ನಿದಿರೆಯ ನೀಗಿಸಲು ಬಾ
ನನಸಾಗದ ಕನಸುಗಳ ಕಾಣುವವರನೆಚ್ಚರಿಸಲು ಬಾ

ಬಾ ಬೆಳಕೆ ಧರೆಗೆ,
ಅನಂತ ದಿಗಂತದ ನೀಲ ವರ್ಣವನ್ನು ತೋರಿಸಲು ಬಾ,
ದಟ್ಟ ಮೋಡಗಳ ಮಂದ ನಡಿಗೆಯ ತೋರಿಸಲು ಬಾ
ಬಾನಾಡಿಗಳ ಸ್ವಚ್ಛಂದ ಹಾರಾತಕೆ ದಾರಿ ದೀಪವಾಗಲು ಬಾ   

ಬಾ ಬೆಳಕೆ ಧರೆಗೆ,
ಮಿತಿ ಇರದ ಸಂಖ್ಯೆಯಲಿಹ ನಕ್ಷತ್ರಗಳನೋಡಿಸಲು  ಬಾ
ಬೆಳೆವೆ ಇಲ್ಲವೇ ಕ್ಷೀಣಿಸುವ ಚಂದಿರನ ಇಲ್ಲವಾಗಿಸಲು ಬಾ
ಕತ್ತಲಿಗೆ ಅಂಜಿಹ ಸೂರ್ಯನನು ಕಡಲಿಂದ ಮೇಲೆತ್ತಲು ಬಾ

ಬಾ ಬೆಳಕೆ ಧರೆಗೆ,
ಮರೆಯಿಂದಲೋ, ಶುನ್ಯದಿಂದಲೋ ನೀ ಬೇಗ ಬಾ
ಭುವಿಯಲಿಹ ಸೌಂದರ್ಯವನೆಲ್ಲ   ಆಸ್ವಾದಿಸಬೇಕೆಂಬ
ನನ್ನ ಬಯಕೆಯ ಕಮಲವನರಳಿಸಲು ಬಾ.      

CHELUVE...

ಕಾಲೇಜನು ಮುಗಿಸಿ ಹಿಡಿದಿದ್ದೆ ಮನೆಯ ದಾರಿ
ನನಗೆದುರಾಗಿ ಬರಬೇಕೇ ಓರ್ವಳು ಚೆಲುವಾದ ನಾರಿ

ಚೆಲುವಿನಲಿ ಸರಿಸಮರು ಇರಲಾರರು ಆಕೆಗೆ
ಅಪ್ಸರೆಯರು ನುಡಿಯುತ್ತಿದ್ದರು ಈ ಚೆಲುವಿಲ್ಲವೇಕೆ ನಮಗೆ

ಪರಿಚಯ ಇಲ್ಲವಾದರೂ ನನ್ನ ನೋಡಿ ನಕ್ಕಳು
ಆ ಕ್ಷಣವೇ ಆಕೆಯೆನ್ನ ಮನದ ಮನೆಯಲಿ ನಿಂತಳು

ನಾ ನಿನ್ನ ಪ್ರೀತಿಸುವೆ ಎಂದು ಹೇಳಬೇಕೆಂದುಕೊಂಡೆ
ಅದಕಾಗಿಯೇ ನಾನವಳ ಕೈಯ ಗಟ್ಟಿಯಾಗಿ ಹಿಡಿದುಕೊಂಡೆ

ಕರ್ಕಶವಾದ ಸ್ವರವೊಂದು ನನ್ನ ಕಿವಿಗೆ ಬಿತ್ತು
ಸುತ್ತಲೂ ನೋಡಿದರೆ ಗಾಢವಾದ ಕಟ್ಟಲು ಕವಿದಿತ್ತು

ನನ್ನ ಬಳಿ ಮಲಗುವ ಪಿಂಕಿ ಬೆಕ್ಕು ಮಾಡುತಿತ್ತು ಕಸರತ್ತು 
ಯಾಕೆಂದರೆ ಚೆಲುವೆಯ ಕೈಯೆಂದು ಹಿಡಿದಿದ್ದೆ ನಾನದರ ಕತ್ತು

ಅರ್ಥವಾಯ್ತು ಆಗ ನನಗೆ ಇದು ನನಸಲ್ಲ ಕನಸು
ಚೆಲುವೆಯ ಬಗೆಗೆ ಬಂತೆನಗೆ ಬರಬಾರದ ಮುನಿಸು

ಚೆಲುವೆಯನು ಮರೆತು, ಪಿಂಕಿಯನು ಬಳಿ ಕರೆದು ಹೊದಿಕೆಯನು ಹೊದ್ದೆ
ಹತ್ತು ನಿಮಿಷದಲೇ ಬಂತೆನಗೆ ಮತ್ತೊಮ್ಮೆ ನಿದ್ದೆ.  
 
 

HUCCHU MANASE..

ನಗುವು ಬರುತಿದೆ ನಿನ್ನ ಕಂಡು
ಹುಚ್ಚು ಹೆಚ್ಚಿರುವ ನನ್ನಯಾ ಮನಸೇ,
ಚಂಚಲತೆಗೆ ವಶವಾಗಿ ನೀ ಬೆಳೆಸಿಕೊಂಡೆ
ಪ್ರೇಮ ಸಾಗರದಲಿ ಈಜು ಕಲಿಯುವಾಸೆ.

ಪ್ರೇಮಿಸುವಳೆನ್ನ ಎಂಬ ಭ್ರಮೆಯು ಕಾಡಿತು
ಒಬ್ಬಾಕೆ ಆಕಸ್ಮಿಕವಾಗಿ ನೋಡಲೆರಡು ಬಾರಿ ನಿನ್ನ 
ಆ ಅಂದದ ಭ್ರಮೆಯಲಿ ಆನಂದ ಪಡೆದೆ,
ಕಳೆದೆ ಕಾಲವಾ ನೋಡುತಲಿ ಆಕೆಯ ಚೆಲುವನ್ನ

ಮೌನವ  ಭೂಷಣವಾಗಿಸಿಕೊಂಡಾಕೆ ನಿನ್ನೊಡನೆ ಮಾತನಾಡಿದಾಗ 
ನಿನ್ನ ಪ್ರೀತಿಯ ಗಿಡಕೆ ಆದಂತಾಯಿತು ನೀರಿನೆರಕ
ನೀರ ಪಡೆದ ಆ ಗಿಡವು ಹೆಮ್ಮರವಾಗಲು
ಅವಳೊಡನೆ ಏಕಾಂತ , ಆಯಿತಲ್ಲವೇ ಪ್ರೇರಕ 

ಕಣ್ತೆರೆದು ವಾಸ್ತವವನು ನೋಡೆನ್ದಾಗ ನೋಡಲಿಲ್ಲ
ಕಣ್ಣಿನ ಮೇಲೆ ನಿನಗಾಗ ಬಂದಿತ್ತು ಪ್ರೀತಿಯೆಂಬ ಪೊರೆ 
ಈ ಪೊರೆಯ ತೆಗೆಯದೆ ಇದ್ದುದಕ್ಕಾಗಿ ತಾನೇ 
ಇಂದು ಪಡೆದುದು ನೀನಾಕೆಯಿಂದ ತಿರಸ್ಕಾರ ಎಂಬ ಉಡುಗೊರೆ

ಮತಿಯು ಮಿತಿಯಲಿರದೆ   ಪ್ರೀತಿಸುವ ಈಜು
ಕಲಿತು ಪ್ರೇಮದ ಕಡಲಿನಲಿ ಮೀನಾಗ ಬಯಸಿದೆ
ಈಜು ಕಲಿಯಲಾರದೆ ನಿರಾಶೆ, ದುಃಖವೆಂಬ 
ದಡದಲಿ ಮೀನಿನಂತೆ ಒದ್ದಾಡುತ್ತಿರುವೆ, ಉಸಿರಾಡಲಾಗದೆ.