ಇತ್ತೀಚೆಗಷ್ಟೇ ಬಾಂಬ್ ಸ್ಫೋಟವಾಗಿದೆ... ಒಬ್ಬಾಕೆಯ ಸಾವಿನ ಸೂತಕ ನಗರಕ್ಕಂಟಿದೆ.... ಆದರೂ ನಮ್ಮದಲ್ಲ ಅದ್ಯಾವುದೋ ದೇಶಗಳ ಹೊಸ ವರುಷದ ಆಚರಣೆಗೆ ನಗರ ತನ್ನ ತಾ ಶೃಂಗರಿಸಿಕೊಳುತಿದೆ. ಮದ್ಯದಾ ಹೊಳೆಯಲಿ ಮುಳುಗೆದ್ದು ತಮ್ಮನು ತಾವೇ ಮರೆಯಲು ಹಲವು ಜನರ ಮನ ತವಕಿಸುತಿದೆ...
ನನ್ನ ಕೈಗಳ ಅವಳು ಹಿಡಿದವಳೇ ರಾಗದ ಮಾತಿನಲಿ "ಈ ನಿನ್ನ ಕೈಗಳಲಿ ದುಂಡು ಚಂದಿರನ ಬಿಡಿಸಬಲ್ಲೆಯಾ...?" ಎಂದು ಮುದ್ದಿಸಿ ಕೇಳಿದಾಗ... ನನಗೆ ಕಲ್ಪನೆಯೇ ಇದ್ದಿರಲಿಲ್ಲ. . . . . . . . ಅವಳೆನ್ನ ಕೈಯಲ್ಲಿ ದೋಸೆಯನು ಮಾಡಿಸಲಿರುವಳೆಂದು.
ಹಣೆಬರಹವನು ಬರೆವವನು ಹಣೆಯಲ್ಲಿ "ಬರಹಗಾರ" ಎಂದು ಬರೆಯದೇ ಹೋದರೆ ಹೇಗೆ ತಾನೇ ಬರಹಗಳು ಹುಟ್ಟೀತು...? ಪದಗಳ ಬೀಜವನು ಉದಾರವಾಗಿ ಕೊಟ್ಟು ನಿನ್ನ ಪರಿಶ್ರಮದ ಬೆವರ ಸುರಿಸಿ ಬಿತ್ತಿಕೋ ಎಂದು ಕಾಲಕಾಲಕ್ಕೆ ಯೋಚನೆಗಳ ಮಳೆ ಸುರಿಸಲಷ್ಟೇ ತಾನೇ ಸಿಗುವುದು ಉತ್ತಮ ಫಸಲು. ಆದರೂ ನಮ್ಮಗೆಲ್ಲಾ ಅದು ನನ್ನ ಸ್ವಂತದ್ದೆನುವ ಅಮಲು