ಅವನನೇಕೆ ಪ್ರೀತಿಸುವೆ ?
ನನ್ನ ನೀ ಆಶಿಸದೆ , ಅವನನೇಕೆ ಆಶಿಸುವೆ ?
ನನ್ನ ನೀ ನೋಡದೆ, ಅವನನೇಕೆ ನೋಡುವೆ ?
ನನ್ನ ನೀ ಪ್ರೀತಿಸದೆ, ಅವನನೇಕೆ ಪ್ರೀತಿಸುವೆ ?
ಕೋಟಿ ತಾರೆಯರ ನಡುವೆ, ಮಿಂಚುವನಂತೆ ನಾನಿಲ್ಲದಾಗ
ತಿಳಿಸಿದವು ನನಗಿದನು ಮೇಘಗಳು ನನ್ನ ಬಳಿ ಬಂದಾಗ
ನಾನಿರಲು ಇರುವುದೇ ಇಲ್ಲ , ಹೆದರುವನೇನೋ ನನ್ನ ನೆನೆದಾಗ
ಕಳ್ಳನವನು ದುಂಡಾಗಿ ಕಂಡರೂ ಕಣ್ಣಿಗೆ ಮುದ್ದು,
ಕೊಡುವನು ಬೆಳದಿಂಗಳನು, ನನ್ನದೇ ಬೆಳಕನು ಕದ್ದು,
ಪ್ರೀತಿಸುವೆ ಅವನನೇತಕೆ ಇದನೆಲ್ಲಾ ಅರಿತಿದ್ದು.
ಇತ್ತ ನೋಡು ಪ್ರಿಯೆ, ನಿನಗಾಗಿ ನನ್ನೇ ನಾ ಸುಟ್ಟುಕೊಂಡು
ಬೆಳಕ ನೀಡುವೆ ನಿನಗೆ, ಈ ಉರಿಯ ನೋವ ನುಂಗಿಕೊಂಡು
ಆದರು ಪ್ರೀತಿಸುವ ಹೃದಯ ಬಾರದೆ ನಿನಗೆ ನನ್ನ ಕಂಡು
ಪ್ರೀತಿಸುವೆ ಏಕೆ ಶಾಶ್ವತವಲ್ಲದ , ಕಾಂತಿ ಇಲ್ಲದ ದೇಹದವನನು
ದುಂಡು ದೇಹದ ಉಗ್ರ ಪ್ರಭೆಯುಳ್ಳ ನಾ ನಿನಗೇಕೆ ಕಾಣೆನು?
ಹೇಳು ಮಾಡಬೇಕು ನಾನೇನು? ಪ್ರೀತಿಸಲು ನನ್ನ ನೀನು.
( ಭೂಮಿ ಚಂದ್ರನನು ಪ್ರೆತಿಸುವ ವಿಷಯ ತಿಳಿದಾಗ ಸೂರ್ಯ ಭೂಮಿಗೆ ಹೇಳುವ ಮಾತು )
Nanna nee aashisade, avananeke aashisuve?
Nanna nee nodade, avananeke noduve?
Nanna nee preethisade, avananeke preethisuve?
Koti taareyara naduve minchuvananthe naanilladaaga
Tilisidavu nanagidanu meghagalu nanna bali bandaaga
Naaniralu iruvude illa , hedaruvaneno nanna nenedaaga
Kallanavanu dundaagi kandaru kannige muddu
Koduvanu beladingalanu, nannade belakanu kaddu
Preetisuve avananetake idanella aritiddu
Itta nodu priye, ninagaagi nanne naa suttukondu
Belaka needuve ninage ee uriya nova nungikondu
Aadaru pretisuva hrudaya baarade ninage nanna kandu
Preetisuve yeke shashwathavallada, kaanthiyillada dehadavananu?
Dundu dehada ugra prabheyulla naa ninageke kanenu?
Helu maadabeku naanenu? preetisalu nanna neenu.
( Bhoomi chandrananu preethisuva vishaya tilidaga soorya bhoomige heluva maatu)