ನೀ ಎಲ್ಲಿರುವೆ? ನೀ ಹೇಗಿರುವೆ?
ನನಗಾಗಿ ಹುಟ್ಟಿರುವ ಓ ಚೆಲುವೆ
ಹಗಲಿರುಳೆನ್ನದೆ ನಾ ಹುಡುಕುತಿರುವೆ
ನೀನಾಗಿಯೇ ಎಂದು ನನ್ನ ಬಳಿ ಬರುವೆ ?
ನೀನಿರದ ಈ ಬಾಳಿನಲಿ
ನೋವಿಹುದು ಮನದ ಮುಲೆಯಲಿ
ಸಂತಸದ ನಗುವಿಲ್ಲ ವದನದಲಿ
ಕಾಯುವಿಕೆಯ ನೋವ ಸಹಿಸುತಿರುವೆ ಮೌನದಲಿ
ನಗುವಿನ ಸೆಲೆಯಾಗಿ ಬರಬಾರದೇಕೆ?
ನನ್ನ ತನುವಿಗುತ್ಸಾಹದುಸಿರಾಗಬಾರದೇಕೆ?
ಕಣ್ಣೊಳಗೆ ಮಿಂಚೊಂದ ತರಬಾರದೇಕೆ?
ನನ್ನ ಮೌನದುಪವಾಸವ ಕೊನೆಗೊಳಿಸಬಾರದೇಕೆ?
ಇಂದು ಮನದೊಳಗೆ ಬರಿಯ ನಿನ್ನಯ ಕಲ್ಪನೆ
ಮುಗಿಯಲಾರದ ಹತ್ತು ಹಲವು ಯೋಜನೆ
ಕಾದು ಬಳಲಿರುವ ನನ್ನೀ ಮನದ ಆಲೋಚನೆ
ಆ ಬ್ರಹ್ಮ ನನ್ನ ಕನಸುಗಳನ್ನೇ ನನ್ನವಳನ್ನಾಗಿಸಿಹನೆ??
No comments:
Post a Comment