Tuesday 24 April, 2012

ಕವಿಯಾಗಲಾರೆ...


ಹೆಚ್ಚೇನೂ ಬೇಕಾಗಿಲ್ಲ, ಸಣ್ಣ ಕವಿಯಾಗಬೇಕೆನುವ ಆಸೆ
ಚೆಲುವಾದ ನಾಲ್ಕು ಸಾಲುಗಳ ಹೊಸೆಯಬೇಕೆನುವ ಆಸೆ
ಸುಂದರ ಭಾವಗಳ ಪದಗಳಲಿ ಹಿಡಿದಿಡುವ ಆಸೆ
ಆದರೂ ನನ್ನ ಮನದಲ್ಲಿ ಕವಿತೆಯ ಬಗೆಗೆ ಸ್ಪಷ್ಟತೆ ಇದೆ
ಈ ಸುಂದರ ಭುವಿಯಲ್ಲಿ ನನಗಸ್ತಿತ್ವ ಕೊಟ್ಟ
ಆ ಭಗವಂತನ ಅಸ್ತಿತ್ವವನೇ ಪ್ರಶ್ನಿಸುವ ಕವಿಯಾಗಲಾರೆ..
ನನ್ನ ಮೆದುಳಿನಲಿ ಪದಗಳನ್ನಿಟ್ಟ ಆ ದೇವನ
ಅದೇ ಪದಗಳಲಿ ದೂಷಿಸುವ ಕವಿ ನಾನಾಗಲಾರೆ..
ಬಾಲ್ಯದಿಂದ ಪಡೆದ ಸಂಸ್ಕಾರಗಳ ತಿರುಳನರಿವೆನೇ ಹೊರತು
ನನ್ನೀ ಪದಗಳಲಿ ಹೀಯಾಳಿಸುವ ಕವಿಯು ನಾನಾಗಲಾರೆ..
ಮಾತೃಧರ್ಮದಲೇ ಗಟ್ಟಿಯಾಗಿ ನೆಲೆಯೂರುವೆನೇ ಹೊರತು
ಇತರ ಧರ್ಮಗಳಿಗೆ ವ್ಯಂಗ್ಯ ಮಾಡುವ ಕವಿ ನಾನಾಗಲಾರೆ..
ನನ್ನ ಹೊತ್ತೊಡಲು ತಾಯಿ ಭಾರತಿಯ, ಪದಗಳಲೇ ಅರ್ಚನೆಗೈಯುವೆ
ಬುದ್ದಿಜೀವಿಯಾಗುವ ಆಸೆಯಲಿ, ಅವಳಿಗಪಚಾರವನೆಸಗಲಾರೆ...
ಶ್ರೇಷ್ಟತೆ ಇದರಿಂದಲೇ ಬರುವುದೆಂದಾದರೆ... ಧಿಕ್ಕರಿಸುವೆ ಶ್ರೇಷ್ಟತೆಯ
ನನ್ನೊಳಗಿನ ಆದರ್ಶವ ಶ್ರೇಷ್ಟತೆಗಾಗಿ ಅಡವಿಡಲಾರೆ...
ಶ್ರೇಷ್ಟತೆಗೆ ಮಾರು ಹೋಗುವ ಈ ಹಾಳು ಲೋಕದಲ್ಲಿ
ನಾನೊಬ್ಬ ಮುಢಮನುಜನಾಗೇ ಉಳಿದುಬಿಡುವೆ..
ಕವಿಯಾಗುವ ನನ್ನ ಬಯಕೆಯನೇ ನಾ ಬಿಟ್ಟುಬಿಡುವೆ...
ಆದರೆ ಶ್ರೇಷ್ಠ ಕವಿಯಾಗಲಾರೆ... 
ನಾನೆಂದಿಗೂ ಶ್ರೇಷ್ಠ ಕವಿಯಾಗಲಾರೆ...

1 comment:

  1. ನಿಮ್ಮ ಎಂದಿನ ಶೈಲಿಗಿಂತ ಈ ಕವನ ತುಂಬಾ ಭಿನ್ನವಾಗಿದೆ ಸರ್. ಮತ್ತು ಇತರರಿಗೆ ಒಳ್ಳೆಯ ಸಂದೇಶ ಕೊಡುವೆ ಕವಿತೆ... ಕವಿಯಾದವನು ಹೊಂದಿರಬೇಕಾದ ಗುಣಗಳನ್ನು ತೋರಿಸುತ್ತದೆ ನಿಮ್ಮ ಕವಿತೆ... ಧನ್ಯವಾದಗಳು

    ReplyDelete