Monday, 22 April 2013

ಅತಿಥಿ ಸತ್ಕಾರ

ನಸುಕಿನ ಮುಂಜಾನೆಯಲಿ
ಮೂಡಣದ ಬಾಗಿಲ ಮುಂದೆ
ಬೆಳಕೆನುವ ಉಡುಗೊರೆಗಳ
ಹೊತ್ತು ಹಾಜರಾದ
ಆಗಸದ ಅತಿಥಿಗೆ
ಪ್ರಕೃತಿಯು ಮಾಡತೊಡಗಿದೆ
ನಲ್ಮೆಯ ಅತಿಥಿ ಸತ್ಕಾರ...
ತರು ಲತೆಗಳೆಲ್ಲವೂ
ತಮ್ಮ ಪ್ರತಿ ಎಲೆಗಳ
ಬೊಗಸೆಯ ತುಂಬಾ
ಇಬ್ಬನಿಯ ಪಾನಕವ ಕೊಡುತಿರೆ,
ಹಕ್ಕಿಗಳು ಇಂಚರದ
ಮಾತಿನಲಿ ಕೇಳುತಿದೆ
ಕುಶಲ-ಕ್ಷೇಮದ ಸಮಾಚಾರ

No comments:

Post a Comment