maunada mathu
Wednesday, 3 April 2013
ನಿಷ್ಕರುಣಿ...
ಕಣ್ಣಲ್ಲಿ ನೆತ್ತರಿರದವನಂತೆ
ಒಂದಿನಿತು ವಿರಾಮ
ನೀಡದೆಯೆ ಸತತ
ದುಡಿಸಿಕೊಳ್ಳುತ್ತಾನೆ,
ಅಬ್ಬಾ..ಈತ
ಅದೆಂಥಾ ನಿಷ್ಕರುಣಿ;
"ಅವಳ" ಬಗೆಗಿನ
ಪುಟ್ಟ ಕವಿತೆ
ಬರೆಯುವಾಗಲೆಲ್ಲಾ
ಇದೇ ರೀತಿ ನನ್ನ
ಮನಸಾರೆ ಶಪಿಸುತ್ತದೆ;
ಬೆರಳ ಬಂಧನದಲಿಹ
ನನ್ನಯಾ ಲೇಖನಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment