Tuesday, 30 September 2014

ಪರಿಮಳ...



ಉರಿಸಿದ
ಊದುಬತ್ತಿಯ
ಪರಿಮಳ
ಯಾವುದೆಂದು
ತಿಳಿಯಲು
ಮೂಸಿ
ನೋಡತೊಡಗಿದೆ,.
.
.
.
.
.
.
.
ಈಗ ಮೂಗಿನ
ಮೇಲೊಂದು
ಸಣ್ಣ ಸುಟ್ಟ
ಗಾಯವಾಗಿದೆ,
ಪರಿಮಳ ಮಾತ್ರ
ಮಾಯವಾಗಿದೆ.

---ಕೆ.ಗುರುಪ್ರಸಾದ್

Monday, 29 September 2014

ಬೆಳೆ


ಹೊಳೆವ
ಮೈಯುಳ್ಳವನೇ
ಬರಬೇಕು
ಇಳೆಗೆ,
ಬೆಳೆವ
ಮನಸಿರುವ
ಬೆಳೆಗೆ.

ವಿಶ್ವ ಹೃದಯ ದಿನ


ಆಚರಿಸಲಾಗದೇ
ಒದ್ದಾಡುತ್ತಿದ್ದೇನೆ
ಗೆಳತೀ....
ಕಾರಣವ
ನಿನ್ನೆದೆಯೊಳಗೇ
ಹುಡುಕು,
ಎರಡೆರಡು
ಹೃದಯದಾ
ಬಡಿತಗಳು
ಮೆಲ್ಲನೆ
ಉತ್ತರವ
ಪಿಸುಗುಟ್ಟಿಯಾವು..

ನಮನ


ಕೊರಳ ಸುತ್ತಿಕೊಂಡ
ಹುರಿಹಗ್ಗವದು
ಹಿಸುಕಿ ಉಸಿರ
ಮೆಲ್ಲಮೆಲ್ಲನೆ
ನಿಲ್ಲಿಸುತ್ತಿದ್ದರೂ...
ತಾಯಿ ಭಾರತಿಯ
ಭಕ್ತಿ ಗೀತೆಯ
ಸ್ಪೂರ್ತಿಯ ಶ್ರುತಿಯನು
ತಪ್ಪಲು ಬಿಡಲೇ ಇಲ್ಲ....
ತಾ ಹಾಡುವುದ
ನಿಲ್ಲಿಸಿದರೂ,
ದೇಶಭಕ್ತಿಯ ಕ್ರಾಂತಿ
ಸಂಗೀತದ ಪಾಠವನು
ಭರತ ಕುವರರಿಗೆ
ಹೇಳಿಕೊಟ್ಟ ಭಗತನಿಗೆ
ನಮಿಸದಿದ್ದರೆ,
ಈ ಸ್ವಾತಂತ್ರ್ಯದ
ರುಚಿಯನನುಭವಿಸಲು
ನಮಗೆ ಯೋಗ್ಯತೆಯೇ ಇಲ್ಲ..

Monday, 22 September 2014

ಕಲ್ಲು - ಪ್ರವಾಹ




ಅಲ್ಲಿದ್ದ ಕಲ್ಲುಗಳೆಲ್ಲವನೂ
ಕೊಂಡೊಯ್ದು ಹೋಯ್ತು,
ಕಲ್ಲೆಸೆದವರ ಮನೆಯನ್ನೂ
ಕೊಚ್ಚಿಕೊಂಡೊಯ್ದದ್ದು
ಕಲ್ಲೆದೆಯ ಪ್ರವಾಹ...
ಆದರೆ......
ಕಲ್ಲೆಸೆದವರನ್ನುಳಿಸಿದ್ದು ಮಾತ್ರ
ಕಲ್ಲೇಟು ತಿಂದರೂ
ಹೃದಯವನು ಕಲ್ಲಾಗಿಸದ
ಯೋಧರು...

ಅಂಟು...



ಯಾವುದರ
ಜೊತೆಗಿರಬೇಕು....?
ಅನ್ನುವ ನಿರ್ಧಾರ
ನಮ್ಮದೇ...
ಕೊಳೆತು
ನಾರುವುದರ
ಜೊತೆಗಿದ್ದರೆ
ದುರ್ಗಂಧ..,
ಸುವಾಸನೆಯ
ಹೂಗಳ
ಜೊತೆಗಿದ್ದರೆ
ಸುಗಂಧ,
ಅದನು
ತನುವಿಗಂಟಿಸುವ
ಜವಾಬ್ದಾರಿ ಮಾತ್ರ
ಪ್ರಕೃತಿಯದು,
ಅಂಟುವುದರ ಬಗ್ಗೆ
ಸಂದೇಹ ಬೇಡ.
ಯಾಕೆಂದರೆ,
ಪ್ರಕೃತಿ ನಮ್ಮಂತೆ
ಸೋಮಾರಿಯಲ್ಲ.

ಕುಸುಮ


ನಿದಿರೆಯಾ
ಚಿಟ್ಟೆಗಾಗಿ
ಕಾಯುತಿದೆ
ನನ್ನ
ನಯನ
ಕುಸುಮ