Thursday, 16 February, 2012
ಮನೆಯಂತೆಯೇ ನನ್ನ ಮನವೂ ಖಾಲಿಯಾಗಿಹುದು
ಅವನಿರದ ಮನೆಯು ಇಂದೇಕೋ ಬೇಡವಾಗಿಹುದು.

ಬರಡು ಭೂಮಿಯಲಿ ಕುಳಿತು ನಾ ಕಾಯತೊಡಗಿದ್ದೆ
ಆ ಕಾರ್ಮುಗಿಲಂತೆಯೆ ಕಣ್ಣೀರ ಹಿಡಿದಿಟ್ಟುಕೊಂಡಿದ್ದೆ

ನಾನರಿಯೆ ಅದ್ಯಾವ ಕಳ್ಳದಾರಿಯಲಿ ಹೊರಬಂತೆನ್ನ ಕಣ್ಣೀರು
ಒಂದೊಂದಾಗಿ ಸೇರಿ ಮಾಡಿತೇ ಈ ಬರಡು ಭೂಮಿಯನೇ ಹಸಿರು

ಸಂತೈಸಲು ಬಾರದಿರಿ ನನ್ನ, ಅವ ಬಾರದೆ ನಾನೆಲ್ಲಿಗೂ ಬರಲಾರೆ
ಕಾಯುವೆನಿಲ್ಲೇ, ಅವನಿಗಲ್ಲದೆ ಮತ್ತಾರಿಗೂ ನನ್ನೀ ಮುಖವ ತೋರಲಾರೆNo comments:

Post a Comment