Sunday, 21 September 2014

ಆರಾಧನೆ



ತನ್ನಾರಾಧನೆಗೆ
ಹೂ ತುಳಸಿಯದು
ಬೇಕೇ ಬೇಕು
ಅನ್ನುತ್ತಾ...
ಮುಂಜಾವಿನಲಿ
ಹೂತೋಟಕೆ
ಕಳುಹಿಸಿ,
ಇಬ್ಬನಿಗಳ
ತಣ್ಣನೆಯ ಸ್ಪರ್ಶ
ಕೊಡಿಸಿದ,
ಹೂ ಚಿಪ್ಪಿನೊಳಗಣ
ನೀರ ಮುತ್ತುಗಳ
ತೋರಿಸಿ
ಮನಕಾಹ್ಲಾದ ನೀಡಿದ,
ತುಳಸಿ ತುದಿಯ
ಕಿತ್ತು ತರಲು
ಪರಿಶುದ್ಧ ಗಾಳಿಯ
ಶ್ವಾಸಕೋಶದೊಳಗಿಳಿಸಿ
ಆರೋಗ್ಯ
ಭಾಗ್ಯವನು,
ಆರಾಧನೆಯ
ಮೊದಲೇ
ದಯಪಾಲಿಸಿದ
ಆ ಭಗವಂತನಿಗಿದೋ
ನನ್ನ ಮುಂಜಾವಿನ
ಅನಂತ ನಮನ


Thursday, 11 September 2014

ಸಂಶಯ



ಸುಪ್ರಸಿದ್ಧ,
ನುರಿತ
ಪಿಟೀಲು
ವಾದಕರೆಲ್ಲಾ
ಅದ್ಯಾವ
ರಾಗದಲ್ಲಿ
.
.
.
.
.
.
.
.
.
.
.
ಹಲ್ಲುಜ್ಜುವರು....?

ಗೊಂದಲ


ಅವಳ
ಕನಸಿರುವ
ಕತ್ತಲು,
ಅವಳು
ಮರೀಚಿಕೆಯಾಗಿರುವ
ಹಗಲು,
ಯಾವುದು
ಹೆಚ್ಚು ಇಷ್ಟ..?
ಅನುವ ಗೊಂದಲ
ಬಿಡದು ನನ್ನ
ಹಗಲಿರುಳೂ..

ಮೂರ್ಛೆ..



ಇರುಳಾಘತಕೆ
ಮೂರ್ಛೆ
ಹೋದ
ಜಗವ
ಎಚ್ಚರಿಸಲು,
ರವಿಯು
ಸಿಂಪಡಿಸುತಿಹನು,
ಬೆಳಕೆನುವ
ನೀರನು..

ಭಾವ ಬರಹ...



ನನ್ನೊಳಗಿದ್ದ
ಅವಳ ಬಗೆಗಿನ
ಭಾವನೆಯನು
ಬರಹವಾಗಿಸಿ,
ಅವಳಿಗೆ ತಲುಪಿಸಿದ್ದೆ.
ಅದನು ಕಂಡ
ಅವಳ.
.
.
.
.
.
.
.
.
.
.
.
.
ಮನೆಯ ಕಸದ
ಬುಟ್ಟಿ ಮನಸಾರೆ
ಅತ್ತಿತ್ತಂತೆ..

ಒಂಟಿತನ



ನಡೆ ಗೆಳೆಯ ನೇಸರನೆ
ನಿನ್ನಂತೆ ನಾನೂ ಒಂಟಿ
ಅವಳ ನೆನಪಿನೂರುಗೋಲನೇ
ಊರೀ ಊರೀ...
ನಡುಗುವ ಹೆಜ್ಜೆಯನು
ಆಧರಿಸುತಿಹೆನು...
ಹಾಗೋ ಹೀಗೋ
ಅಂತೂ ಇನ್ನೊಂದು
ಹಗಲಿನಂತ್ಯವ ತಲುಪಿಹೆನು.

ನಿನ್ನ ನೆಲೆಯಷ್ಟು
ದೊಡ್ದದಲ್ಲವಾದರೂ
ನಾನೂ ನಿದಿರೆಯಿಲ್ಲದ
ಕತ್ತಲಿನಲಿ ನೆಲೆಸುವುದು
ಕಣ್ಣೀರ ಕಡಲಲ್ಲೇ...
ನನ್ನ ಬಿಟ್ಟು ಬಲುಬೇಗ
ಹೋದವಳ ನೆನಪಲ್ಲೇ...

ಮಹಾಗುರು...



ಪ್ರತಿದಿನವೂ
ಅದೇನನ್ನಾದರೂ
ಕಲಿಸುವ
" ಸಮಯ "
ಮತ್ತು ಅದು
ತಂದೊಡ್ಡುವ
" ಜೀವನ "
ಇವರುಗಳೇ
ನನ್ನ ಪಾಲಿನ
ದ್ರೋಣಾಚಾರ್ಯ
ಮತ್ತು
ನಾನೇ ಅವರ
ಪಾಲಿಗೆ
ಏಕಲವ್ಯ.