maunada mathu
Friday, 30 January 2015
ವಿವೇಕ-ಆನಂದ
ನಿನ್ನಣಿಮುತ್ತುಗಳ
"ವಿವೇಕ"ಯುತವಾಗಿ
ಅರ್ಥೈಸಿ
ಮನದಾಳದಲಿ
ಭದ್ರವಾಗಿರಿಸಿ,
ತೋರ್ಬೆರಳ ನೀಟಿ
ನೀ ತೋರಿದ
ಹಾದಿಯಲೇ
ಸಾಗಿದರೆ ಸಾಕು
ಭಾರತೀಯರೆಲ್ಲರಿಗೂ
ಭಾರತಮಾತೆಗೂ
"ಆನಂದ"ವೇ...
ಮೇ-ಕಪ್ಪು
ಮೊಗವ
ಸಿಂಗರಿಸಿಕೊಳ್ಳುವ
ಮೇಕಪ್ಪು ಸೆಟ್
ಕೊಂಡುಕೊಂಡಾಕೆ
ಪತ್ನಿಯಾದರೂ...
ಬಿಲ್ ಕಟ್ಟುವಾಗ
ಪತಿರಾಯರ
ಮುಖ ಪೂರ್ತಿ
ಕಪ್ಪು ಕಪ್ಪಾಗಿತ್ತು
ಆಸೆ..
ಇಡಿಯ ದಿನದಲಿ
ನಿನ್ನ ನೋಡುವಷ್ಟು
ಗಳಿಗೆಯ ಕಾಲು
ಭಾಗದಷ್ಟಾದರೂ
ನನ್ನ ಅವಳು
ನೋಡಲಿ..
ಎನುವುದೇ
ನನ್ನ ಆಸೆ
.
.
.
.
.
.
.
.
ಓ ಕನ್ನಡಿಯೇ...
ನಿಸ್ಸೀಮ...
ಗೆಳತೀ..
ಬರಿಯ
ನಿನ್ನ ಸುಖದ
ಸಂಕಲ್ಪಕೆ
ಬದ್ಧನಾದ
ದಿನದಿಂದ,
ನನ್ನ ಕಣ್ಣೀರ
ನದಿಗಣೆಕಟ್ಟು
ಕಟ್ಟುವುದರಲಿ
ನಿಸ್ಸೀಮನಾಗಿದ್ದೇನೆ.
ಹಾರ
ಪ್ರತಿ ಇರುಳಲಿ
ಸುರಿಯುವ
ನನ್ನ ಕಣ್ಣೀರ
ಮುತ್ತುಗಳ
ನಾ ಪೋಣಿಸುವುದಿಲ್ಲ
ಅವಳ
ಕೊರಳಲಿರುವ
ಅವನಿತ್ತ
ಬಂಗಾರದೊಡವೆಗಳಿಗೆ
ಇದು ಸರಿಸಾಟಿಯಲ್ಲಾ
ತಳಮಳ
ನನ್ನೊಳಗಿನ
ತಳಮಳವನ್ನೆಲ್ಲಾ
ತಾನೇ
ಖುದ್ದು
ನೋಡಬೇಕೆಂದೇ
ಏನೋ
ಅವಳು
ನೆನಪಾಗಿ
ನನ್ನೊಳಗಿಳಿಯುವುದು
ಪ್ರೇಮ ವೈಫಲ್ಯ
ನನ್ನ ಯೋಗ್ಯತೆಗೂ
ಮೀರಿದ್ದು ಸಿಕ್ಕಿತೆನುವಾಗ
ನಾ ಪಡಬಹುದಾಗಿದ್ದ
ಖುಷಿಗಿಂತ..
ನನ್ನ ಯೋಗ್ಯತೆಗಿಂತ
ಇಷ್ಟು ಕೆಳಮಟ್ಟದ್ದು
ನನಗೇಕೆ...?
ಎನುವ ಅವಳ
ಬೇಸರವೇ
ಜಾಸ್ತಿಯಾಗಿ
ಕಂಡಿತಂತೆ
ಭಗವಂತನಿಗೆ
ಅದಕಾಗೇ ಆತ
ನನಗೂ ಅವಳಿಗೂ
ಪ್ರೇಮದ ನಂಟನು
ಕೊಡಲೇ ಇಲ್ಲ
ಇದು ನನ್ನ
ಪ್ರಾರ್ಥನೆಯ ಸೋಲಲ್ಲ
ಅವಳ ಭಕ್ತಿಯ
ಗೆಲುವು.
Newer Posts
Older Posts
Home
Subscribe to:
Comments (Atom)