ಯಾಕೆಂದರೆ ಭಾರತದ ಕ್ರಿಕೆಟ್ ತಂಡಕ್ಕೆ ನನಾಯ್ಕೆಯಾಗಿದ್ದೆ.
ಪಾಕಿಸ್ತಾನದೆದುರಿನ ಮ್ಯಾಚಿಗೆ ನನ್ನನ್ನು ಹಾಕಿ ಮಾಡ ಹೊರಟರೆನ್ನ ಅಗ್ನಿ ಪರೀಕ್ಷೆ.
ಆದರು ಧೃತಿಗೆಡದೆ ತವಕದಿಂದ ಮಾಡುತ್ತಿದ್ದೆ ಆ ಸಮಯದ ನಿರೀಕ್ಷೆ.
ಅಂತು ಇಂತು ಬಂದೇಬಿಟ್ಟಿತು ನಾನಾಡಬೇಕಿದ್ದ ಮ್ಯಾಚು.
ಜಯವು ನಮ್ಮದಾಗಲೇಬೇಕು ಎಂದರು ನಮ್ಮ ಕೋಚು.
ಟಾಸ್ ಗೆದ್ದ ಅವರು ಭರ್ಜರಿ ಬ್ಯಾಟಿಂಗ್ ಮಾಡತೊಡಗಿದರು.
ಬಸವಳಿದು ಸುಸ್ತಾಗಿ ಬೆವರು ಸುರಿಸತೊಡಗಿದರು ನಮ್ಮ ಬೌಲರು.
ಆ ದೇವನ ದಯದಿಂದ ಕಪ್ತಾನನ ದೃಷ್ಟಿ ನನ್ನ ಮೇಲೆ ಬಿತ್ತು.
ನನಗೆ ಕೊಟ್ಟ ಮೊದಲ ಓವರಿನಲ್ಲಿ ಮಿಂಚಿದೆ ೩ ವಿಕೆಟ್ ಕಿತ್ತು.
ಚೊಚ್ಚಲ ಪಂದ್ಯದಲಿ ಸಿಕ್ಕಿತೆನಗೆ ಐದು ವಿಕೆಟ್ ಗಳ ಗೊಂಚಲು
ಆದರು ೨೯೫ ರನ್ ಗಳಿಸಬೇಕಾಗಿತ್ತು ನಾವು ಜಯಗಳಿಸಲು.
ಫಾಸ್ಟು ಬೌಲಿಂಗಿಗೆ ಆಗಿದ್ದರವರು ಭಾರೀ ಫೇಮಸ್ಸು
ಹಾಗಾಗಿಯೇ ನಮ್ಮ ಬ್ಯಾಟ್ಸಮನ್ ಗಳು ಬೇಗನೆ ಬಂದರು ಪೆವಿಲಿಯನ್ನಿಗೆ ವಾಪಸ್ಸು.
ಐದನೇ ಬ್ಯಾಟ್ಸಮನ್ ಆಗಿ ಹೊರಡಬೇಕಾದ ಸಮಯ ಬಂತು ನೋಡಿ
ಎದುರಾಳಿಗಳು ನಕ್ಕರು ನನ್ನ ನೋಡಿ, ನನಗೆ ತಮಾಷೆಯ ಮಾಡಿ.
ಅವಮಾನ ಮತ್ತು ಕೋಪದಿಂದ ಬೀಸು ಹೊಡೆತಗಳಿಗೆ ಕೈ ಹಾಕಿದೆ
ಇದರಿಂದಾಗಿಯೇ ಇಪ್ಪತ್ತು ಎಸೆತದಲೇ ಹಾಫ್ ಸೆಂಚುರಿ ಮುಗಿಸಿದೆ.
ಈ ರೀತಿ ಮುಂದುವರಿದು ಬಾರಿಸಿದೆ ಹಲವಾರು ಸಿಕ್ಸರು
ಆಗವರಿಗೆ ಬಂದೆ ಬಿಟ್ಟಿತು ಕಣ್ಣಲ್ಲಿ ಕಣ್ಣೀರು
ಆದರೆ ನನ್ನ ಮೊದಲ ಸೆಂಚುರಿಗೆ ಎರಡು ರನ್ನಿರುವ ವೇಳೆ
ನನ್ನ ದುರಾದೃಷ್ಟಕೆ ಬಂದು ಬಿಡಬೇಕೇ ಜೋರಾದ ಮಳೆ
ಪ್ರೇಕ್ಷಕರಂದರು ನನ್ನ ಬಗೆಗೆ ಇದು ಅವನ ದುರ್ದೆಷೆ
ನಿಲ್ಲಲಾರದ ಮಳೆಯ ಕಂಡು ನನಗಾಯಿತು ತೀವ್ರ ನಿರಾಶೆ
ಮಳೆಯ ನೀರಿಗೆ ನೆನೆದ ಮೈಯನ್ನು ನೋಡುತ್ತಲಿದ್ದಾಗ
ಹಠಾತ್ತನೆ ಕೇಳಿಸಿತು ನನ್ನಮ್ಮನ ಸಿಡುಕಿನ ಸುಪ್ರಭಾತದ ರಾಗ
ಅರ್ಥವಾಯಿತು ನನಗಾಗ ಬಂದೆ ಇರಲಿಲ್ಲ ಮಳೆಯು ಭಾರಿ ಜೋರು
ನಿದ್ದೆಯಿಂದೆಬ್ಬಿಸಲು ನನ್ನಮ್ಮ ಸುರಿದಿದ್ದರು ನನ್ನ ಮೇಲೆ ನೀರು.