ನಾನಿರುವುದು ನಿನ್ನ ನೆನಪಿನ ಕಡಲಲ್ಲಿ
ಮರೆವೆನುವ ದಡವೇ ಸಿಗುತ್ತಿಲ್ಲ,
ಪ್ರಯತ್ನ ಎನುವ ಈಜಿನ ಕೊನೆಯಲ್ಲಿ.
ನನ್ನೆದುರು ನಿನ್ನಯಾ ಇರುವು
ಇದ್ದಂತೆ ಹಗಲಿನಲಿ ಸೂರ್ಯನ ಬೆಳಕು,
ಮನದೊಳಗಿನ ನಿನ್ನ ನೆನಪುಗಳು
ಕತ್ತಲಲಿರುವಂತೆ ಚಂದಿರನ ಬಿಳಿ ಬೆಳಕು
ನಿಂತಂತೆ ಕಂಡರೂ ಹಲವು ಕಡೆ
ನದಿಯಲಿರುವುದು ನಿರಂತರ ಹರಿವು
ಅದರಂತೆಯೇ ಮರತಂತೆ ಕಂಡರೂ,
ನನ್ನ ಮನದೊಳಗಿಹುದು ನಿನ್ನ ಸವಿನೆನಪು.
No comments:
Post a Comment