Sunday, 29 January 2012


ಮುಂಜಾವಿನಿಂದ ಮುಸ್ಸಂಜೆಯವರೆಗೆ
ಬಣ್ಣ ಬಣ್ಣದ ತೊಡುಗೆಗಳ ತೊಟ್ಟು
ನೀಲಿ ನೀಲಿ ಪರದೆಯ ಮುಂದೆ
ತನ್ನ ಪಾತ್ರವನಾಡಿ ಬಳಲಿದನು ನೇಸರ.
ಇದುವೇ ಸರಿಯಾದ ಸಮಯವೆಂದು
ತಾರೆಗಳ ತಂಡವನೇ ಕರೆತಂದು
ಕಪ್ಪು ಬಣ್ಣದ ಪರದೆಯನು ಎಳೆದು
ಆಗಸದ ರಂಗಮಂಟಪವನಾವರಿಸಿದನು ಚಂದಿರ

1 comment:

  1. ಇಷ್ಟೆಲ್ಲಾ ಓದಿ ನೋಡಿದರೆ..
    'ಕಡಲ ತೀರದ ಭಾರ್ಗವ' ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರ.. ನೆನಪಾಗಿ... ಈಗ ನಿಜಕ್ಕೂ ನಿಮ್ಮನ್ನು ...
    ಕಡಲ ತೀರದ ಭಾಸ್ಕರ .. ಎಂದು ಕರೆಯಬಹುದೇ... :) ಮ್.. ಬರಲಿ ಭಾಸ್ಕರನ ಮತ್ತಷ್ಟು ಕಲ್ಪನಾ ಲೋಕ ನಿಮ್ಮಿಂದ .. ಅದೇಕೋ ಅದರಲ್ಲಿ ವಿಶೇಷ ಸೆಳೆತ ಇದೆ.. ನಿಮಗೂ ಮತ್ತು ನಿಮ್ಮ ಪದಗಳ ರಚನೆಗೂ.. :)

    ReplyDelete