Wednesday, 20 March 2013

ನಮ್ಮೂರ ತೇರು...

.

ಆಳೆತ್ತರದ ನಾಲಕ್ಕು ಚಕ್ರಗಳು...
ಅದಕೆ ಹೊಂದಿಕೊಂಡಿರುವಂತಿರುವ ಪೀಠ..
ಆ ಪೀಠದ ಸುತ್ತ ಕೆತ್ತಲ್ಪಟ್ಟಿರುವ ಹಳೆಯ ಶಿಲ್ಪ ವೈಭವ..
ಮತ್ತಷ್ಟು ಮೆರುಗು ತರಲೆಂದು ಅದಕೆ
ಬಗೆ ಬಗೆಯ ಹೂಮಾಲೆಯಾಲಂಕಾರ
ಮತ್ತೆ ಮೇಲಕ್ಕೆ ನಿಲ್ಲಿಸಿರುವ ದೇವತೆಗಳ ಬಣ್ಣದ ಚಿತ್ರಪಟ..
ನಟ್ಟ ನಡುವೆ ಸಣ್ಣ ಪೀಠದ ಮೇಲೆ ಗಾಂಭೀರ್ಯದಲಿ
ಕುಳಿತು ರಾರಾಜಿಸುತಿರುವ ಬಲಿಮೂರ್ತಿ..
ಮತ್ತೆ ಮೇಲೆ ಮೇಲಕ್ಕೆ ಗೋಲಾಕಾರದಲಿ
ಜೋಡಿಸಲ್ಪಟ್ಟ ಸಣ್ಣ ಸಣ್ಣ ಕೆಂಪು ಬಿಳಿಯ ಬಾವುಟಗಳು
ಅದರ ತುದಿಯಲಿ ನಿಂತಿರುವ ಬಟ್ಟೆಯಿಂದಾದ ಕಲಶ..
ಆ ಕಲಶಕೆ ನೆರಳನೀಯುವಂತಿರುವ ತುತ್ತತುದಿಯ ಛತ್ರಿ...
ಇಡಿಯ ತೇರಿನಂದವ ಹೆಚ್ಚಿಸುವ ಬದಿಯ ಎರಡು ಬಾವುಟಗಳು..
ಅಹಾ ಅದೆಂತಾ ಸೊಬಗು, ನನ್ನೂರ ತೇರಿನದು.
ಜಯ ಘೋಶದಲಿ ಈ ರಥವ ಮೆಲ್ಲ ಮೆಲ್ಲನೆ ಎಳೆದರೆ ಸಾಕು
ಧನ್ಯತೆಯ ಭಾವವೊಂದು ತೇರನೆಳೆದವರ ಆವರಿಸುವುದು...

No comments:

Post a Comment