Thursday, 7 March 2013

ಕೋಪ...



ತಾನಿಟ್ಟ ಮೊದಲಡಿಯಲ್ಲೇ
ಕತ್ತಲ ಕರಗಿಸಿದ ನೇಸರ
ತಾನಿಷ್ಟ ಪಡೋ ಇಳೆಯನು
ಮಂಜಿನ ಬಿಗಿಯಪ್ಪುಗೆಯಿಂದ
ಬಿಡಿಸಿಕೊಳ್ಳಲೀಗ ಒದ್ದಾಡುತಿದ್ದಾನೆ;
ಕರಗಿ ನೀರಾಗಲೆಂದು ಬಿಟ್ಟ
ತನ್ನ ಬಿಸಿಯ ಬಿಸಿಲ ಬಾಣದ
ವೈಫಲ್ಯತೆಯನು ಕಂಡು
ಕೋಪದಲಿ ಕೆಂಪು ಕೆಂಪಾಗಿದ್ದಾನೆ.

No comments:

Post a Comment