maunada mathu
Wednesday, 20 March 2013
ಜನನ
ನಿನ್ನೆಯಾ ಸಂಜೆಯಲಿ
ಬೆಳೆದ ರವಿಯೊಬ್ಬ ಸತ್ತು
ನಭವನಾವರಿಸಿದ್ದ ಕತ್ತಲೆನುವ
ಸೂತಕದ ಛಾಯೆಯ
ಕಳೆಯುವ ಸಲುವಾಗಿ;
ಮತ್ತೆ ಹೆತ್ತಳು ಶರಧಿ
ದಿವ್ಯ ಪ್ರಭೆಯ ಶಿಶುವೊಂದನು
ಮುಸುಕು ಮಂಜಾವಿನಲಿ
ನಗುವಿನಾ ಬೆಳಕ ಮತ್ತೆ
ಎಲ್ಲೆಡೆಗೂ ಚೆಲ್ಲುವುದಕಾಗಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment