Thursday, 7 March 2013

ಹೊನ್ನ ಕಲಶ

ಮುಂಜಾನೆಯ ಮೂಡಣದ
ಸಾಗರದ ಮೇಲ್ಮೈಯಲಿ
ನಿಂತಿರಲು ಬೆಳಕಿನಾ
ಮೂಲ ಪುರುಷ;
ಕಂಡ ಹಾಗಾಯಿತೆನಗೆ
ಭುವಿಯ ತಟ್ಟೆಯಲಿಹ
ಅರಶಿನದೋಕುಳಿಯ ನಡುವೆ
ಇಟ್ಟಂತೆ ಹೊನ್ನ ಕಲಶ.

No comments:

Post a Comment